ಅನುಷ್ಕಾ ಶೆಟ್ಟಿಗೆ ತಲೆನೋವಾಗಿರುವ ಮಾಧ್ಯಮಗಳು

ಬುಧವಾರ, 1 ಜುಲೈ 2015 (09:58 IST)
ಕಾಲಿವುಡ್ ಸಿನಿಮಾರಂಗದಲ್ಲಿ ಯಾವ ಹೀರೋ ಹೀರೋಯಿನ್ ಆಗಲಿ ಮೀಡಿಯಾ ಮಂದಿ ಕಡೆಗೆ ಹೆಚ್ಚಿನ ಆದ್ಯತೆ ನೀಡದೆ ಇದ್ದರೆ ಆಗ ಮೀಡಿಯಾಗಳಲ್ಲಿ ಅವರ ಬಗ್ಗೆ ಬಗೆ ಬಗೆ ಸಂಗತಿಗಳು ಹೊರ ಬರುವಂತೆ ಮಾಡುತ್ತದೆ ಎನ್ನುತ್ತಾರೆ ಅಲ್ಲಿನವರು. ಆ ವಿಷಯಕ್ಕೆ ಸಂಬಂಧಪಟ್ಟಂತೆ ನಟಿ ಅನುಷ್ಕ ಶೆಟ್ಟಿ ಅವರಿಗೆ ಈಗ ಆತಂಕ, ಗೊಂದಲ ಉಂಟಾಗಿದೆ ಎಂದೇ ಹೇಳ ಬಹುದಾಗಿದೆ. 
ಈಗ ಸಿಂಗಂ 3 ರಲ್ಲಿ ನಟ ಅನುಷ್ಕ  ಹಾಗೂ ಕಾಲಿವುಡ್ ಟಾಪ್ ಸ್ಟಾರ್ ಸೂರ್ಯ ಅವರು ಒಟ್ಟಿಗೆ ನಟಿಸುತ್ತಿದ್ದಾರೆ. ಆದರೆ ಕಳೆದ ಎರಡುಬಾರಿ ಪ್ರೇಮಿಗಳಾಗಿ ಉಳಿಯುವ ಜೋಡಿಗೆ ಮೂರನೇ ಭಾಗದಲ್ಲಿ ಮದುವೆ ಮಾಡುವ ವಿಷಯ ಅಂದರೆ ಕಥೆಯಲ್ಲಿ ನಿರ್ಧಾರ ಮಾಡಿದ್ದಾರೆ ನಿರ್ದೇಶಕ ಹರಿ ಅವರು.ಇವರಿಗೆ ಮಕ್ಕಳು ಸಹಿತ ಇರುತ್ತಾರೆ ಎನ್ನುವುದು ಮುಂದುವರೆದ ಭಾಗದ ಕಥೆಯಾಗಿದೆ ಎನ್ನುವ ಸುದ್ದಿ ಹರಡಿದೆ. .  
 
ಹಾಗಾದರೆ ಸಿಂಗಂ 3  ರಲ್ಲಿ ಅನುಷ್ಕ ತಾಯಿ ಪಾತ್ರಧಾರಿಯಾಗ ಬೇಕಾದರೆ ತೂಕ ಹೆಚ್ಚಿಸಿಕೊಳ್ಳಬೇಕು. ಆದರೆ ಆರೀತಿ ಆಗಿಲ್ಲ, ಏಕೆಂದರೆ ಆ ಚಿತ್ರದಲ್ಲಿ ಅನುಷ್ಕ ಪಾತ್ರದ ಬಗ್ಗೆ ಇನ್ನು ತಿಳಿದು ಬಂದಿಲ್ಲ ಎನ್ನುತ್ತಿದ್ದಾರೆ ಆಕೆಯ ಪಿ ಆರ್.  ಪ್ರಸ್ತುತ ಆಕೆ ಆರ್ಯ ಜೊತೆ ಜೀರೋ ಸೈಜ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.  ಆ ಚಿತ್ರದಲ್ಲಿ ಆಕೆಯ ಪಾತ್ರದ ಕೆಲಸ ಮುಗಿದ ಬಳಿಕ ಈ ಚಿತ್ರದ ಬಗ್ಗೆ ಅಂದರೆ ದಪ್ಪಗಾಗಬೇಕೋ, ಸಣ್ಣಗಾಗಬೇಕೋ ಎನ್ನುವುದನ್ನು ನಿರ್ಧರಿಸುತ್ತಾರಂತೆ!  

ವೆಬ್ದುನಿಯಾವನ್ನು ಓದಿ