ಶಾಹಿದ್ ಜೊತೆ ಝಲಕ್ ದಿಕ್ ಲಾಜಾ ಶೋನಲ್ಲಿ ಕಾಣಿಸಿಕೊಳ್ಳಲಿರುವ ಮೀರಾ

ಶನಿವಾರ, 1 ಆಗಸ್ಟ್ 2015 (10:36 IST)
ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಶಾಹಿದ್ ಕಪೂರ್ ಸದ್ಯ ಹನಿಮೂನ್ ಪಿರೇಡ್ ನಲ್ಲಿದ್ದಾರೆ. ವಿವಾಹವಾಗಿ ಒಂದು ತಿಂಗಳು ಸಮೀಪಿಸುತ್ತಿದ್ದರೂ ಶಾಹಿದ್ ಹಾಗೂ ಮೀರಾ ರಜಪೂತ್ ಇಲ್ಲಿಯವರೆಗೂ ಹನಿಮೂನ್ ಗೆ ತೆರಳಿಲ್ಲ. ಅದಕ್ಕೆ ಕಾರಣ ಶಾಹೀದ್ ಕಪೂರ್ ಝಲಕ್ ದಿಕ್ ಲಾಜಾ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿರೋದು. ಆದ್ರೆ ಇಷ್ಟು ದಿನ ಶಾಹೀದ್ ಶೋನಲ್ಲಿ ತಾವೊಬ್ಬರೇ ಕಾಣಿಸಿಕೊಳ್ಳುತ್ತಿದ್ದರು. ಆದ್ರೆ ಇನ್ನು ಕೆಲವೇ ದಿನಗಳಲ್ಲಿ ಶಾಹೀದ್ ಪತ್ನಿ ಜೊತೆ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹೌದು... ಅತೀ ಶೀಘ್ರದಲ್ಲಿ ಶಾಹೀದ್ ಹಾಗೂ ಮೀರಾ ಕಾಣಿಸಿಕೊಂಡಿರುವ ಝಲಕ್ ದಿಕ್ ಲಾಜಾ ಶೋದ ಎಪಿಸೋಡ್ ಪ್ರಸಾರವಾಗಲಿದೆ. ಇಷ್ಟು ದಿನ ಶೋದಲ್ಲಿ  ಶಾಹೀದ್ ಒಬ್ಬರೇ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದ್ರೆ ಈ ಬಾರಿ ಪ್ತನಿ ಜೊತೆ ಶಾಹೀದ್ ಭರ್ಜರಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಇದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.
 
ಇನ್ನು ಒಂದು ವಿಷ್ಯಾ ಏನಪ್ಪಾ ಅಂದ್ರೆ ಶಾಹೀದ್ ಹಾಗೂ ಮನೀರಾ ರಜಪೂತ್ ಅವರದ್ದು ಪಕ್ಕಾ ಆರೇಂಜ್ ಮ್ಯಾರೇಜ್. ಜೊತೆಗೆ ಇಬ್ಬರ ನಡುವೆ ತುಂಬಾ ಯೇಜ್ ಗ್ಯಾಂಪ್ ಇದೆ. ಹೀಗಾಗಿ ಇಬ್ಬರ ನಡುವೆ ಕೆಮೆಸ್ಟ್ರಿ ಹೇಗಿದೆ ಅಂತಾ ನೋಡೋ ಕುತೂಹಲ ಅಭಿಮಾನಿಗಳದ್ದು. ಆದ್ರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಎಪಿಸೋಡ್ ಪ್ರಸಾರವಾದ ಬಳಿಕವೇ ಉತ್ತರ ಸಿಗಲಿದೆ.

ವೆಬ್ದುನಿಯಾವನ್ನು ಓದಿ