ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಮೆಗಾಸ್ಟಾರ್ ಚಿರಂಜೀವಿ

ಗುರುವಾರ, 30 ನವೆಂಬರ್ 2023 (16:26 IST)
Photo Courtesy: Twitter
ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆ ವೋಟಿಂಗ್ ಪ್ರಕ್ರಿಯೆ ಇಂದು ನಡೆಯುತ್ತಿದ್ದು, ಮೆಗಾಸ್ಟಾರ್ ಚಿರಂಜೀವಿ ಕುಟುಂಬ ಸಮೇತರಾಗಿ ಬಂದು ವೋಟ್ ಮಾಡಿದ್ದಾರೆ.

ಪತ್ನಿ ಜೊತೆ ಬಂದ ಚಿರಂಜೀವಿ ಸರತಿ ಸಾಲಿನಲ್ಲಿ ಜನ ಸಾಮಾನ್ಯರ ಜೊತೆ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ. ವಿಶೇಷವೆಂದರೆ ಅಯ್ಯಪ್ಪ ಮಾಲಧಾರಿಯಾಗಿರುವ ಚಿರಂಜೀವಿ ಬರಿಗಾಲಿನಲ್ಲಿ ಬಂದು ವೋಟ್ ಮಾಡಿದ್ದಾರೆ.

ಚಿರಂಜೀವಿ ಕುಟುಂಬ ಅಯ್ಯಪ್ಪ ಸ್ವಾಮಿ ಭಕ್ತರು. ಚಿರು ಪುತ್ರ ರಾಮ್ ಚರಣ್ ಕೂಡಾ ಅಯ್ಯಪ್ಪ ವ್ರತ ಕೈಗೊಳ್ಳುತ್ತಾರೆ. ಈ ಸಮಯದಲ್ಲಿ ಬರಿಗಾಲಿನಲ್ಲೇ ಓಡಾಡುತ್ತಾರೆ. ಇದೀಗ ಚಿರು ಕೂಡಾ ತಮ್ಮ ಚಿತ್ರ ಜೀವನದಲ್ಲಿ ಏರಳಿತವಾಗಿರುವಾಗ ದೇವರ ಮೊರೆ ಹೋಗಿದ್ದಾರೆ.

ಪತ್ನಿ ಸುರೇಖಾ, ಪುತ್ರಿ ಶ್ರೀಜಾ ಜೊತೆ ಮತದಾನ ಕೇಂದ್ರಕ್ಕೆ ಬಂದಾಗ ಮಾಧ‍್ಯಮಗಳು ಅವರನ್ನು ಮುತ್ತಿಕೊಂಡಿವೆ. ಆದರೆ ಎಲ್ಲರತ್ತ ಕೈ ಬೀಸಿದ ಚಿರು ವೋಟ್ ಮಾಡಿ ಅಲ್ಲಿಂದ ತೆರಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ