ಮೆಗಾಸ್ಟಾರ್ ಚಿರಂಜೀವಿ ಪಾರ್ಟಿಯಲ್ಲಿ ಮಿಂಚಿದ ರಮೇಶ್ ಅರವಿಂದ್, ಸುಮಲತಾ ಅಂಬರೀಶ್

ಮಂಗಳವಾರ, 26 ನವೆಂಬರ್ 2019 (09:55 IST)
ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ತಮ್ಮ 80 ರ ದಶಕದ ಸಿನಿ ಸ್ನೇಹಿತರಿಗಾಗಿ ಹೈದರಾಬಾದ್ ನ ನಿವಾಸದಲ್ಲಿ ಭರ್ಜರಿ ಪಾರ್ಟಿ ಆಯೋಜಿಸಿದ್ದರು.














ಈ ಪಾರ್ಟಿಯಲ್ಲಿ ದಕ್ಷಿಣ ಭಾರತ ಸಿನಿಮಾ ರಂಗದ  ಅನೇಕ ದಿಗ್ಗಜ ನಟರು, ತಂತ್ರಜ್ಞರು ಪಾಲ್ಗೊಂಡಿದ್ದಾರೆ. ಸ್ಯಾಂಡಲ್ ವುಡ್ ನಿಂದ ರಮೇಶ್ ಅರವಿಂದ್, ಸುಮಲತಾ ಅಂಬರೀಶ್ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ತೆಲುಗು ಸಿನಿಮಾ ರಂಗದ ನಾಗಾರ್ಜುನ ಶರತ್ ಕುಮಾರ್, ಖುಷ್ಬೂ, ನಿರ್ದೇಶಕ ರಾಜಮೌಳಿ, ಸುಹಾಸಿನಿ ಸೇರಿದಂತೆ ಅನೇಕ ದಿಗ್ಗಜ ನಟ ನಟಿಯರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಪಾರ್ಟಿಯಲ್ಲಿ ಮಸ್ತ್ ಮಜಾ ಮಾಡಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.







ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ