ಸಾಮಾನ್ಯವಾಗಿ ಸ್ಯಾಂಡಲ್ವುಡ್ ನಲ್ಲಿ ಈ ರೀತಿಯ ಸುದ್ದಿ ಕೇಳಿ ಬರಲ್ಲ. ಆದರೆ ಆಗಾಗ ಅಂತಹ ಸುದ್ದಿ ಕೇಳಿಸಿದರೂ ಆ ಜೋಡಿಯ ಬಗ್ಗೆ ಹೆಚ್ಚು ಗಮನ ನೀಡುವಂತೆ ಮಾಡುತ್ತದೆ. ಅದೇ ರೀತಿ ಆಗಿದೆ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ವಿಷಯದಲ್ಲೂ ಸಹಿತ. ಅವರಿಬ್ಬರೂ ಈಗ ಡೇಟಿಂಗ್ ಮಾಡುತ್ತಿರುವ ಸಂಗತಿ ಗುಟ್ಟಾಗಿ ಉಳಿದಿಲ್ಲ ಈಗ. ಅಲ್ಲದೇ ಈ ಜೋಡಿ ಸಧ್ಯದಲ್ಲೇ ಒಟ್ಟಾಗಿ ನಟಿಸುವ ಸಾಧ್ಯತೆ ಕಂಡು ಬರುತ್ತಿದೆ. ಹಾಗೆನ್ನುವುದಕ್ಕಿಂತ, ಇದು ಬಹುತೇಕ ಸತ್ಯ ಎನ್ನುವ ಸುದ್ದಿ ಹರಡಿದೆ ಗಾಂಧೀ ನಗರದಲ್ಲಿ.