ಬೆಂಗಳೂರು: ನಟಿ ಮೇಘನಾ ಸರ್ಜಾ ಇತ್ತೀಚೆಗೆ ಕೊರೋನಾ ಭಯದಿಂದ ಹೋಂ ಕ್ವಾರಂಟೈನ್ ಗೊಳಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ ಮೇಘನಾ ತಂದೆ, ನಟ ಸುಂದರ್ ರಾಜ್ ಮತ್ತು ತಾಯಿ ಪ್ರಮೀಳಾ ಜೋಷಾಯ್ ಕೊರೋನಾ ಸೋಂಕಿತರಾಗಿದ್ದರು. ಜೊತೆಗೆ ಸ್ವತಃ ತಾವೇ ಕೊರೋನಾ ಅಪಾಯಕ್ಕೊಳಗಾಗಿದ್ದರು. ಈ ಅನುಭವಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಜನರು ಸುರಕ್ಷಿತವಾಗಿರುವಂತೆ ಮನವಿ ಮಾಡಿದ್ದಾರೆ.
ಇತ್ತೀಚೆಗೆ ನಾನೂ ಕೊರೋನಾ ಅಪಾಯಕ್ಕೊಳಗಾಗಿದ್ದೆ. ಪುಟ್ಟ ಮಗು, ವಯಸ್ಸಾದ ತಂದೆ-ತಾಯಿ ಇದ್ದಿದ್ದರಿಂದ ಕೆಲವು ದಿನಗಳ ಕಾಲ ನಾನೂ ಐಸೋಲೇಟ್ ಆದೆ. ನನ್ನ ತಂದೆ-ತಾಯಿ, ಪುಟ್ಟ ಮಗನನ್ನು ನೆನೆದು ಮಾನಸಿಕವಾಗಿ ಭಯಗೊಂಡಿದ್ದೆ. ಅದೃಷ್ಟವಶಾತ್ ಲಕ್ಷಣಗಳಿದ್ದರೂ ಕೊನೆಗೆ ಪರೀಕ್ಷಿಸಿದಾಗ ನೆಗೆಟಿವ್ ವರದಿ ಬಂತು. ಕೆಲವರಿಗೆ ಇದು ಬೇಗನೇ ವಾಸಿಯಾಗುತ್ತದೆ. ಮತ್ತೆ ಕೆಲವರಿಗೆ ಹಲವು ಸಮಯಗಳೇ ಹಿಡಿಯುತ್ತವೆ. ಆದರೆ ನಮ್ಮಿಂದಾಗಿ ಇನ್ನೊಬ್ಬರಿಗೆ ಹರಡದಂತೆ ತಡೆಯುವುದೇ ನಾವು ಮಾಡಬಹುದಾದ ಅತ್ಯುತ್ತಮ ಕೆಲಸ. ಹೀಗಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಯಾನಿಟೈಸ್ ಮಾಡೋಣ. ಆದಷ್ಟು ಸುರಕ್ಷಿತವಾಗಿರೋಣ ಎಂದು ಮೇಘನಾ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.