ಜ್ಯೂನಿಯರ್ ಚಿರುಗೆ ಸಿಕ್ಕ ಹೊಸ ಗೆಳೆಯನ ಪರಿಚಯ ಮಾಡಿದ ಮೇಘನಾ ರಾಜ್

ಭಾನುವಾರ, 22 ಆಗಸ್ಟ್ 2021 (10:09 IST)
ಬೆಂಗಳೂರು: ಚಿರು ಸರ್ಜಾ-ಮೇಘನಾ ರಾಜ್ ಪುತ್ರನಿಗೆ ಇಂದು 10 ತಿಂಗಳು ತುಂಬಿದ ಖುಷಿ ಒಂದೆಡೆಯಾದರೆ ಹೊಸ ಗೆಳೆಯ ಸಿಕ್ಕಿದ ಖುಷಿ ಇನ್ನೊಂದೆಡೆ. ಈ ಖುಷಿಯನ್ನು ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


ಜ್ಯೂನಿಯರ್ ಚಿರುಗೆ ಇಂದು 10 ತಿಂಗಳು ಪೂರ್ತಿಯಾಗುತ್ತಿದ್ದು, ಈ ವಿಶೇಷ ದಿನಕ್ಕೆ ಚಿರು ಪುತ್ರನಿಗೆ ಹೊಸ ಗೆಳೆಯ ಸಿಕ್ಕಿದ್ದಾನೆ ಎಂದು ಮೇಘನಾ ಬರೆದುಕೊಂಡಿದ್ದಾರೆ.

ಒಂದು ಚಿಂಪಾಂಜಿ ಬೊಂಬೆ ಜ್ಯೂನಿಯರ್ ಚಿರು ಹೊಸ ಗೆಳೆಯನಾಗಿದ್ದು, ಇದಕ್ಕೆ ‘ಚಾಂಪ್’ ಎಂದು ಹೆಸರಿಟ್ಟಿದ್ದಾರಂತೆ. ಇದು ಜ್ಯೂನಿಯರ್ ಚಿರುಗೆ ತುಂಬಾ ಇಷ್ಟವಾಗಿದೆ ಎಂದು ಮೇಘನಾ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ