ಮೊದಲ ಶೋ ಮಿಸ್ ಮಾಡಿಕೊಂಡ ಮೇಘನಾ

ಮಂಗಳವಾರ, 1 ಸೆಪ್ಟಂಬರ್ 2015 (09:28 IST)
ಪ್ರತಿ ಸಿನಿಮಾ ತಾರೆಯರಿಗೂ ತಮ್ಮ ಸಿನಿಮಾ ಮೊದಲ ದಿನ ಪ್ರದರ್ಸನವಾಗುವಾಗ ಏನೇ ಒಂದು ರೀತಿ ಭಯ ಆತಂಕ ಇದ್ದೇ ಇರುತ್ತದೇ. ಅದೇ ಭಯ ನಟಿ ಮೇಘನಾ ರಾಜ್ ಅವರಿಗೂ ಇತ್ತಂತೆ. ಇತ್ತೀಚೆಗಷ್ಟೇ ಮೇಘನಾ ಅಭಿನಯಿಸಿದ ಆಟಗಾರ ಸಿನಿಮಾ ರಿಲೀಸ್ ಆಗಿದೆ. ಆದರೆ ಸಿನಿಮಾದ ಮೊದಲ ಶೋವನ್ನು ಮಾತ್ರ ಮೇಘನಾ ನೋಡೇ ಇಲ್ವಂತೆ.
ಮೇಘನಾ ರಾಜ್ ಮೊದಲ ದಿನದ ಮೊದಲ ಶೋಗೆ ಬರಲಾಗಲಿಲ್ಲವಂತೆ ಕಾರಣ ಶುಕ್ರವಾರ ಬೆಳಗ್ಗೆ ತಮ್ಮ ಅಂತಿಮ ವರ್ಷದ ಪರೀಕ್ಷೆ ಬರೆಯುತ್ತಿದ್ದರಂತೆ. ಆದ್ರೆ "ಗುರುವಾರ ರಾತ್ರಿ ನನಗೆ ವಿಪರೀತ ಭಯವಾಗಿತ್ತು ಏಕೆಂದರೆ ಶುಕ್ರವಾರ ಆಟಗಾರ ಬಿಡುಗಡೆ ಮತ್ತು ನನ್ನ ಪರೀಕ್ಷೆ. ಆದರೆ ಚಿತ್ರದ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡಿದ್ದೆ" ಎಂದಿದ್ದಾರೆ ಮೇಘನಾ.
 
ರಾಜ್ಯಶಾಸ್ತ್ರ ಪದವಿ ಅಧ್ಯಯನ ಮಾಡುತ್ತಿರುವ ಮೇಘನಾ "ಮೊದಲ ಶೋ ನಡೆಯುವಾಗ ನಾನು ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುವತ್ತ ಗಮನ ಹರಿಸಿದ್ದೆ. ಸಿನಿಮಾಗೆ ವೀಕ್ಷಕರ ಪ್ರತಿಕ್ರಿಯೆ ಹೇಗಿತ್ತು ಎಂದು ತಿಳಿಯುತ್ತಿರಲಿಲ್ಲ. ಆದರೆ ನಂತರ ಪರೀಕ್ಷೆ ಕೊಠಡಿಯಂದ ಹೊರಗೆ ಓಡಿ ಬಂದು, ನಮ್ಮ ತಾಯಿಗೆ ಕರೆ ಮಾಡಿ ಸಿನಿಮಾಗೆ ಪ್ರತಿಕ್ರಿಯೆಗಳ ಬಗ್ಗೆ ಕೇಳಿ ಥ್ರಿಲ್ ಆದೆ" ಅಂದಿದ್ದಾರೆ ಮೇಘನಾ.

ವೆಬ್ದುನಿಯಾವನ್ನು ಓದಿ