ಬೆಂಗಳೂರು: ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಮತ್ತು ಲವ್ ಮಾಕ್ಟೇಲ್ ಸಿನಿಮಾ ಖ್ಯಾತಿಯ ಮಿಲನಾ ನಾಗರಾಜ್ ಜೋಡಿಯಾಗಿ ಅಭಿನಯಿಸುತ್ತಿರುವ ಫಾರ್ ಆರ್ ಜಿಎನ್ ಸಿನಿಮಾ ಚಿತ್ರೀಕರಣ ಶುರುವಾಗಿದೆ.
ಈ ಸಿನಿಮಾ ಅನೌನ್ಸ್ ಆಗಿ ಕೆಲವು ದಿನ ಕಳೆದಿದೆ. ಇದೀಗ ಹಾಡಿನ ಚಿತ್ರೀಕರಣದ ಮೂಲಕ ಚಿತ್ರೀಕರಣ ಶುರುವಾಗಿದೆ. ಉಡುಪಿಯ ಕಡಲ ಕಿನಾರೆಯಲ್ಲಿ ರೊಮ್ಯಾಂಟಿಕ್ ಹಾಡೊಂದರ ಚಿತ್ರೀಕರಣದಲ್ಲಿ ಭಾಗಿಯಾದ ಫೋಟೋವನ್ನು ಮಿಲನಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ಸಿನಿಮಾಗೆ ನವೀನ್ ನಿರ್ದೇಶನ ಮಾಡುತ್ತಿದ್ದಾರೆ. ಪೃಥ್ವಿ ಅಂಬರ್-ಮಿಲನಾ ನಾಗರಾಜ್ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ.