ಬಿಡುಗಡೆಗೂ ಮುನ್ನವೇ ಹೊಸ ದಾಖಲೆ ಬರೆದ ಮಿಸ್ಟರ್ ಐರಾವತ

ಶುಕ್ರವಾರ, 18 ಸೆಪ್ಟಂಬರ್ 2015 (11:40 IST)
ಮೊನ್ನೆ ಮೊನ್ನೆಯಷ್ಟೇ ಮೈಸೂರಿನಲ್ಲಿ  ಅದ್ದೂರಿಯಾಗಿ ಮೈಸೂರಿನಲ್ಲಿ ಆಡಿಯೋ ರಿಲೀಸ್ ಮಾಡಿದ್ದ ಮಿಸ್ಟರ್ ಐರಾವತ ಸಿನಿಮಾ ತಂಡ ಇದೀಗ ಮತ್ತೊಂದು ದಾಖಲೆ ನಿರ್ಮಿಸಲು ರೆಡಿಯಾಗಿದೆ. ಅಕ್ಟೋಬರ್ 1 ರಂದು ದೇಶದಾದ್ಯಂತ ರಿಲೀಸ್ ಆಗುತ್ತಿದೆ. ಆದ್ರೆ ರಿಲೀಸ್ ವಿಷಯದಲ್ಲೂ ಸಿನಿಮಾ ಸುದ್ದಿಯಾಗಿದೆ.
ಮಿಸ್ಟರ್ ಐರಾವತ ಚಿತ್ರ ದೇಶದಾದ್ಯಂತ 350 ಥಿಯೇಟರ್ ಗಳಲ್ಲಿ ರಿಲೀಸ್ ಆಗುತ್ತಿದೆ. ಅದರಲ್ಲೂ ಕರ್ನಾಟಕದಲ್ಲೇ 315 ಥಿಯೇಟರ್ ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಈವರೆಗೂ ಕನ್ನಡದ ಸಿನಿಮಾ ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿಲ್ಲ. ಮತ್ತೊಂದು ವಿಶೇಷ ಅಂದ್ರೆ ಈ ಸಿನಿಮಾ ಅಮೇರಿಕಾ ಹಾಗೂ ದುಬೈನಲ್ಲೂ ಬಿಡುಗಡೆಯಾಗುತ್ತಿದೆ.  ಮತ್ತೊಂದು ಅಚ್ಚರಿಯ ವಿಷಯ ಅಂದ್ರೆ ಸಿನಿಮಾದ ಸಾಟ್ ಲೈಟ್ ಹ್ಕು ಈಗಾಗಲೇ ಸುಮಾರು 5 ಕೋಟಿ ರೂಪಾಯಿಗೆ ಸೇಲ್ ಆಗಿದೆ.ಹಾಗಾಗಿ ಸಿನಾಮದ ನಿರ್ಮಾಪಕರಿಗೆ ಈಗಾಗಲೇ ಹಾಕಿದ ಬಂಡವಾಳ ವಾಪಸ್ ಬಂದಿದೆ.
 
ಈ ಸಿನಿಮಾದಲ್ಲಿ ದರ್ಶನ್ ಗೆ ನಾಯಕಿಯಾಗಿ ಊರ್ವಶ್ರೀ ಕಾಣಿಸಿಕೊಂಡಿದ್ದು, ಎ.ಪಿ. ಅರ್ಜುನ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸಂದೇಶ್ ನಾಗರಾಜ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಅನಂತ್ ನಾಗ್, ಪ್ರಕಾಶ್ ರೈ,  ಸಾಧುಕೋಕಿಲ ಮುಂತಾದ ಕಲಾವಿದರು ಸಿನಿಮಾದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ