ಹುಚ್ಚ ವೆಂಕಟ್ ಹೆಸರಲ್ಲಿ ಮೊಬೈಲ್ ಆಪ್

ಗುರುವಾರ, 26 ನವೆಂಬರ್ 2015 (10:08 IST)
ಅನೇಕ ಸೌಲಭ್ಯಗಳನ್ನು ಹೊತ್ತು  ದಿನಕ್ಕೊಂದು ಮೊಬೈಲ್ ಆಪ್ಲಿಕೇಷನ್‌ಗಳು ಬರ್ತಾನೇ ಇರುತ್ತವೆ. ಆದ್ರೆ ವ್ಯಕ್ತಿಗಳ ಹೆಸರಲ್ಲಿ ಆಪ್‌ಗಳು ಬಂದಿರೋದು ತುಂಬಾ ಕಡಿಮೆ. ಆದ್ರೆ ನಿಮಗೊಂದು ಅಚ್ಚರಿ ವಿಷಯವಿದೆ. ಅದೇನಂದ್ರೆ ಹುಚ್ಚ ವೆಂಕಟ್ ಹೆಸರಲ್ಲಿ ಈಗ ಹೊಸ ಆಪ್ ಒಂದು ಬಂದಿದೆ.
   
ನವೆಂಬರ್ 16 ರಂದು ಬಿಡುಗಡೆಯಾಗಿರುವ ಈ ಆಡ್ರೋಯಿಡ್ ಫೋನ್ ಆಪ್ ನಲ್ಲಿ ಹುಚ್ಚ ವೆಂಕಟ್ ಅವರ ಕೆಲ ಪ್ರಸಿದ್ಧ ವಿಡಿಯೋಗಳು ಅವರ ಕೆಲ ಆಯ್ದ ಡೈಲಾಗ್ ಗಳು ಇವೆಯಂತೆ. ಆಪ್ ಬಿಡುಗಡೆಯಾಗಿ ಇನ್ನು ಹತ್ತು ದಿನಗಳು ಆಗುವ ಮೊದಲೇ ಸುಮಾರ ಸಾವಿರಕ್ಕೂ ಹೆಚ್ಚು ಜನ ಈಗಾಗಲೇ ಈ ಆಪ್‌ನ್ನು ಡೌನ್ ಲೋಡ್ ಮಾಡಿಕೊಂಡು ಬಳಸುತ್ತಿದ್ದಾರಂತೆ.ಇನ್ನು ಆಪ್‌ಗೆ 'ಹುಚ್ಚ ವೆಂಕಟ್' ಎಂದೇ ನಾಮಕರಣ ಮಾಡಲಾಗಿದೆಯಂತೆ. ಪಡ್ಡೆ ಹೈಕ್ಳಂತೂ ಆಪ್‌ನ್ನು ತಮ್ಮ ಮೊಬೈಲ್ ಗಳಲ್ಲಿ ಡೌನ್ ಲೋಡ್ ಮಾಡಿಕೊಂಡು ಸಖತ್ ಮಜಾ ಮಾಡುತ್ತಿದ್ದಾರಂತೆ.
 
ಸದ್ಯ ಆಪ್‌ನಿಂದಾಗಿ ವೆಂಕಟ್ ಪರಪ್ಪನ ಅಗ್ರಹಾರದಲ್ಲಿದ್ದರೂ ಅವರ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಹೀರೋ ನನ್ನು ತಮ್ಮ ತಮ್ಮ ಮೊಬೈಲ್‌ಗಳಲ್ಲಿ ನೋಡುವ ಅವಕಾಶ ಸಿಕ್ಕಿದಂತಾಗಿದೆ. ಆಪ್ ಬಿಡುಗಡೆಯಾಗಿರೋದು ಗೊತ್ತಾದ್ರೆ ವೆಂಕಟ್ ಅದಕ್ಕೂ ಒಂದು ಡೈಲಾಗ್ ಹೊಡೆದ್ರೂ ಅಚ್ಚರಿಯಿಲ್ಲ. ಫಾರಿನ್‌ನಲ್ಲೂ ಈ ಆಪ್ ನನ್ನು ಅಲ್ಲಿನ ಪ್ರಧಾನಿಗಳು ಬಳಸ್ತಿದ್ದಾರೆ ಅಂತಾ ಹುಚ್ಚ ವೆಂಕಟ್ ಡೈಲಾಗ್ ಹೊಡಿದ್ರೂ ಹೊಡಿಬಹುದು ಅಂತಿದ್ದಾರೆ ಅವರ ಕೆಲ ಅಭಿಮಾನಿಗಳು.

ವೆಬ್ದುನಿಯಾವನ್ನು ಓದಿ