ರೂಪದರ್ಶಿಯೊಬ್ಬಳ ಮೈನವಿರೇಳಿಸುವ ಫೋಟೋಶೂಟ್!

ಶನಿವಾರ, 18 ಫೆಬ್ರವರಿ 2017 (13:07 IST)
ಗಗನಚುಂಬಿ ಕಟ್ಟಡದಿಂದ ನೇತಾಡುತ್ತಾ ರೂಪದರ್ಶಿಯೊಬ್ಬಳು ಮಾಡಿರುವ ಫೋಟೋಶೂಟ್ ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ರಷ್ಯನ್ ಮಾಡೆಲ್ ವಿಕಿ ವೋಡಿನ್ಟೊಕೋವಾ ಮಾಡಿರುವ ಸ್ಟಂಟ್ ನೋಡುತ್ತಿದ್ದರೆ ಮೈನವಿರೇಳಿಸುವಂತಿದೆ.  
 
ದುಬೈನಲ್ಲಿನ ಗಗನಚುಂಬಿ ಕಟ್ಟಡದ ಮೇಲಿಂದ ಅದ್ಭುತವಾದಂತಹ ಫೋಟೋಶೂಟ್ ಮಾಡಿದ್ದಾರೆ. ತುಂಬಾ ಎತ್ತರವಾದ ಕಟ್ಟಡದಿಂದ ಯಾವುದೇ ರೀತಿಯ ಭದ್ರತೆ ತೆಗೆದುಕೊಳ್ಳದೆ ಕೆಳಗೆ ನೇತಾಡುವ ಫೋಟೋಶೂಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
 
ಇದಕ್ಕೆ ಸಂಬಂಧಿಸಿದ ವಿಡಿಯೋವನ್ನೂ ಆಕೆ ಇನ್‍ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದು ಇದನ್ನು ನಾಲ್ಕು ಲಕ್ಷ ಮಂದಿ ವೀಕ್ಷಿಸಿದ್ದಾರೆ. ಈ ಫೋಟೋಗೆ ಸಾವಿರಾರು ಮಂದಿ ಲೈಕ್ ಸಹ ಒತ್ತಿದ್ದಾರೆ. ಇನ್‍ಸ್ಟಾಗ್ರಾಮ್‌ನಲ್ಲಿ ಫೇಮಸ್ ಆದ ಈ ಮಾಡೆಲ್‌ಗೆ 3.2 ದಶಲಕ್ಷ ಮಂದಿ ಫಾಲೋವರ್ಸ್ ಇದ್ದಾರೆ.
 
ಇಷ್ಟೆಲ್ಲಾ ಎತ್ತರವಾದ ಕಟ್ಟಡಗಳ ಮೇಲಿಂದ ಯಾವುದೇ ಮುಂಜಾಗ್ರತೆ ಇಲ್ಲದಂತೆ ಫೋಟೋಶೂಟ್ ಮಾಡಿರುವ ಬಗ್ಗೆಯೂ ಸಾಕಷ್ಟು ಟೀಕೆಗಳು ಕೇಳಿಬಂದಿವೆ. ಈ ಫೋಟೋವನ್ನು ಹೇಗೆ ತೆಗೆದರು ಎಂಬ ಬಗ್ಗೆ ಸ್ಪಷ್ಟೀಕರಣ ನೀಡಲು ಆಕೆ ವಿಡಿಯೋವನ್ನೂ ಪೋಸ್ಟ್ ಮಾಡಿದರು. ದುಬೈನಲ್ಲಿನ ಕಯಾನ್ ಟವರ್ ಮೇಲೆ ಈ ಫೋಟೋ ತೆಗೆಯಲಾಗಿದೆ. 
 
ಇದು 1000 ಅಡಿ ಎತ್ತರದ ಕಟ್ಟಡ. 70 ಅಂತಸ್ತುಗಳಲ್ಲಿದೆ. ಅಷ್ಟೆಲ್ಲಾ ಎತ್ತರದ ಕಟ್ಟದಿಂದ ವ್ಯಕ್ತಿಯೊಬ್ಬನ ಕೈಹಿಡಿದುಕೊಂಡು ನೇತಾಡುವುದೆಂದರೆ ತಮಾಷೆಯಲ್ಲ. ಒಂಚೂರು ಹೆಚ್ಚು ಕಡಿಮೆಯಾದರೂ ಅಷ್ಟೇ... ಏನೇ ಆಗಲಿ ಮಾಡೆಲ್ ಧೈರ್ಯವನ್ನು ಮೆಚ್ಚಬೇಕು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ