ಸೂಪರ್ ಸ್ಟಾರ್ ಮೋಹನ್ ಲಾಲ್, ಮಮ್ಮೂಟ್ಟಿಗೆ ದುಬೈನ ಗೋಲ್ಡನ್ ವೀಸಾ ಗೌರವ
ಮಂಗಳವಾರ, 24 ಆಗಸ್ಟ್ 2021 (10:40 IST)
ದುಬೈ: ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಗಳಾದ ಮೋಹನ್ ಲಾಲ್ ಮತ್ತು ಮಮ್ಮೂಟ್ಟಿಗೆ ದುಬೈ ಸರ್ಕಾರ ವಿಶೇಷ ಗೋಲ್ಡನ್ ವೀಸಾ ನೀಡಿ ಗೌರವಿಸಿದೆ.
ವಿಶೇಷ ಗಣ್ಯರಿಗೆ ಮಾತ್ರ ದುಬೈ ಸರ್ಕಾರ ಈ ಸೌಲಭ್ಯ ನೀಡುತ್ತದೆ. ಅದರಂತೆ ಈ ವೀಸಾ ಪಡೆದವರು 10 ವರ್ಷಗಳ ಕಾಲ ದುಬೈನಲ್ಲಿ ನೆಲೆಸಬಹುದಾಗಿದೆ. ಇದಕ್ಕೂ ಮೊದಲು ಬಾಲಿವುಡ್ ನಟ ಶಾರುಖ್ ಖಾನ್, ಸಂಜಯ್ ದತ್, ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ಈ ಗೌರವ ಸಿಕ್ಕಿತ್ತು.
ಸದ್ಯಕ್ಕೆ ಮದುವೆಯೊಂದರಲ್ಲಿ ಪಾಲ್ಗೊಳ್ಳಲು ಜೊತೆಯಾಗಿ ದುಬೈಗೆ ತೆರಳಿರುವ ಮೋಹನ್ ಲಾಲ್ ಮತ್ತು ಮಮ್ಮೂಟ್ಟಿ ಜೊತೆಯಾಗಿಯೇ ದುಬೈ ಸರ್ಕಾರದ ವತಿಯಿಂದ ಗೋಲ್ಡನ್ ವೀಸಾ ಪಡೆದಿದ್ದಾರೆ.