ಜೂನಿಯರ್ ಎನ್ಟಿ ಆರ್ ಅವರಿಗೆ ಇಬ್ಬರು ಸುಂದರಿಯರ ಲಿಪ್ ಲಾಕ್ ಎಲ್ಲಿ ಗೊತ್ತೇ?

ಮಂಗಳವಾರ, 3 ಜೂನ್ 2014 (09:45 IST)
ರಭಸ... ಇದು ಯಂಗ್ ಅಂಡ್ ಎನರ್ಜಿಟಿಕ್ ಟಾಲಿವುಡ್ ಹೀರೋ ಜೂನಿಯರ್ ಎನ್ಟಿಆರ್ ಅವರು ನಟಿಸುತ್ತಾ ಇರುವ ಹೊಸ ಚಿತ್ರ. ಅದರಲ್ಲಿ ಸಮಂತ ಮತ್ತು ಪ್ರಣೀತ ಇಬ್ಬರು ಜೂನಿಯರ್ ಜೊತೆ ಆಗಿದ್ದಾರೆ. ರಭಸ ಚಿತ್ರಕ್ಕೆ ಸಂಬಂಧಪಟ್ಟಂತೆ ಹೊಸ ಸಂಗತಿ ಹೊರ ಬಿದ್ದಿದೆ. ಅದು ಒಂದು ಬಗೆಯಲ್ಲಿ ಆಸಕ್ತಿ ಕರವಾಗಿದೆ ಎಂದೆನ್ನುವ ಮಾತನ್ನು ಟಾಲಿವುಡ್ ಮಂದಿ ಹೇಳುತ್ತಿದ್ದಾರೆ.
 
ಅತ್ತಿಂಟಿಕಿ ದಾರೇದಿ  ಚಿತ್ರದ ಮುಖಾಂತರ ಉತ್ತಮ ತಿರುವು ಪಡೆದ ನಟಿ ಪ್ರಣೀತ . ಆ ಚಿತ್ರದಲ್ಲಿ  ಸಮಂತ ಸಹ ನಟಿಸಿದ್ದು,  ಪವನ್ ಕಲ್ಯಾಣ್ ಹೀರೋ ಆಗಿದ್ದರು. ಇವರುಗಳ ಕೆಮಿಸ್ಟ್ರಿ ತುಂಬಾ ಚೆನ್ನಾಗಿ ಕೆಲಸ ಮಾಡಿತ್ತು ಸಿಲ್ವರ್ ಸ್ಕ್ರೀನ್ ಮೇಲೆ. ರಭಸದಲ್ಲೂ ಸಹ ಈ ಹೆಣ್ಣುಮಕ್ಕಳು ಒಟ್ಟಾಗಿ ನಟಿಸುತ್ತಿದ್ದು, ಅದರ ಹೀರೋ ಜೂನಿಯರ್ ಈ ಇಬ್ಬರು ಹೆಣ್ಣುಮಕ್ಕಳ ಜೊತೆ ಲಿಪ್ಲಾಕ್ ಸಂಭ್ರಮದ ಆಚರಣೆಯಲ್ಲಿ ಇದ್ದಾರೆ. ಈಗಾಗಲೇ ಸಮಂತ ಎನ್ಟಿ ಆರ್ ಅವರ ಜೊತೆ ನಟಿಸಿದ್ದರು ಲಿಪ್ ಲಾಕ್ ಮಾಡಿರಲಿಲ್ಲ. 
 
ಆದರೆ ರಭಸ ಚಿತ್ರದಲ್ಲಿ ಆಕೆಯು ಎನ್ಟಿ ಆರ್ ಗೆ ಮುತ್ತು ನೀಡಿದ್ದಾಳೆ.. ಅದು ಜಾಸ್ತಿ ಸ್ಟ್ರಾಂಗ್ ಆಗಿ ಅಂತ ಹೇಳ್ತಾ ಇದ್ದಾರೆ ಚಿತ್ರತಂಡ. ಎನ್ಟಿ ಆರ್ ಜೊತೆ ಮುದ್ದಾಟ ಆಡೋಕೆ ತನಗೂ ಎಂತಹ ಚಿಂತೆ ಇಲ್ಲ ಅನ್ನುವ ಮಾತು ಹೇಳಿದ್ದಾಳೆ ಪ್ರಣೀತ ಒಟ್ಟಾರೆ ರಭಸ ಚಿತ್ರದಲ್ಲಿ ಏನೇನು ಇದೆಯೋ ಗೊತ್ತಿಲ್ಲ, ಆದರೆ ಇಬ್ಬರು ಹುಡುಗಿಯರು ಒಬ್ಬ ಹುಡುಗನ ಮುದ್ದಾಟ ಆಡುವುದು ಮಾತ್ರ ಇದ್ದೆ ಇದೆ.. ಅದೇ ಆ ಚಿತ್ರದ ಆಕರ್ಷಣೆ ಆಗಿದೆ ಟಾಲಿವುಡ್ ಮಂದಿಗೆ.. ಎಮಂಡೊಯ್.. ಚಾಲ ಹ್ಯಾಪಿನಾ ?

ವೆಬ್ದುನಿಯಾವನ್ನು ಓದಿ