ರಕ್ಷಿತಾ ಸುದೀಪ್ ಅವರನ್ನು ವಿಮರ್ಶೆ ಮಾಡೋ ವಿಷಯದಲ್ಲಿ ಹಿಂದೆ ಮುಂದೆ ನೋಡಲ್ಲ- ಪ್ರೇಂ

ಬುಧವಾರ, 2 ಜುಲೈ 2014 (10:02 IST)
ರಕ್ಷಿತಾ ಕನ್ನಡ ಚಿತ್ರರಂಗ ಮಾತ್ರವಲ್ಲ ದಕ್ಷಿಣ ಭಾರತದ ಸಿನಿಮಾಗಳಲ್ಲಿ ತನ್ನ ಪ್ರತಿಭೆ ತೋರಿ ಎಲ್ಲರ ಮನಗೆದ್ದ ಚೆಲುವೆ. ತಾನು ಇನ್ನು ಸ್ಟಾರ್ ಡಂ ನಲ್ಲಿ ಇರುವಾಗಲೇ ವೃತ್ತಿ ಬದುಕಿಗೆ ಬಾಯಿ ಹೇಳಿದ ಆಕೆ ಮತ್ತೆ ವೈವಾಹಿಕ ಜೀವನಕ್ಕೆ ಆದ್ಯತೆ ಕೊಟ್ಟರು. ನಿರ್ದೇಶಕ ಮತ್ತು ನಟ ಪ್ರೇಂ ಅವರನ್ನು ಮದುವೆ ಆಗಿ ಮಗುವಿನ ತಾಯಿ ಆದರು ರಕ್ಷಿತಾ. 
 
ಸುಖ ಸಂಸಾರದಲ್ಲಿ ಒಂದಷ್ಟು ಗಾಳಿ ಸುದ್ದಿಗಳು ಅಲ್ಲೋಲ್ಲಕಲ್ಲೋಲ ಉಂಟು ಮಾಡಿದರು ಸಹ ಆ ಜೋಡಿ ಕ್ಯಾರೆ ಅನ್ನದೆ ತಮ್ಮ ಮನೆಯಲ್ಲಿ ಒಟ್ಟಾಗಿ ಹಾಯಾಗಿದ್ದಾರೆ ಮುದ್ದು ಕಂದನ ಜೊತೆ. ರಕ್ಷಿತಾಪ್ರೇಂ  ಮತ್ತು ಸುದೀಪ್ ಕಾಲನುಕಾಲದಿಂದ ಅತ್ಯುತ್ತಮ ಸ್ನೇಹಿತರು. ಅವರೆಷ್ಟು   ಒಳ್ಳೆ ಫ್ರೆಂಡ್ಸ್ ಅಂದ್ರೆ ಚಿತ್ರರಂಗದಲ್ಲಿ ಆಗುವ , ಎದುರಾಗುವ ಯಾವುದೇ ತೊಂದರೆಗಳಿಗೆ ಬೆದರದೆ ತಮ್ಮ ಆ ಸ್ನೇಹವನ್ನು ತುಂಬಾ ಚೆನ್ನಾಗಿ ಇಟ್ಟು ಕೊಂಡಿದ್ದಾರೆ.
 
.......ಇನ್ನು ಇದೆ. ಮುಂದೆ ಓದಿ. 
 
 

ಈ ಜೋಡಿ ಎಷ್ಟೇ ಒಳ್ಳೆ ಸ್ನೇಹಿತರಾಗಿದ್ದರು ಸಹ ಒಂದು ಬಾರಿಯೂ ತೆರೆಯ ಮೇಲೆ ಒಟ್ಟಾಗಿ ಕಂಡಿಲ್ಲ. ಒಳ್ಳೆಯ ಸ್ನೇಹಿತರು ಮಾತ್ರವಲ್ಲ ಒಬ್ಬರ ಬಗ್ಗೆ ಮತ್ತೊಬ್ಬರು ನೇರವಾಗಿ ತಮ್ಮ ಅಭಿಪ್ರಾಯ ಹೇಳುವಂತಹ ನಿಷ್ಟುರವಾದಿಗಳಂತೆ!ಸಾಮಾನ್ಯವಾಗಿ ಯಾರೇ ಆಗಲಿ ಒಮ್ಮೆಯಾದರು ತಮ್ಮ ಗೆಳೆಯ  ಅಥವಾ ಗೆಳತಿ ಜೊತೆ ನಟಿಸುತ್ತಾರೆ ಅದೇ ಕ್ಷೇತ್ರದಲ್ಲಿ ಇದ್ದಾಗ.
 
 ಆದರೆ ಇವರು ಮಾತ್ರ ಆರೀತಿ ಮಾಡಿಲ್ಲ . ಅದೇರೀತಿ ಪ್ರೇಂ ನಿರ್ದೇಶನದಲ್ಲಿ ನಟಿಸಲು ಸುದೀಪ್ ಸಮ್ಮತಿ ಕೊಟ್ಟಿರಲಿಲ್ಲವಂತೆ. ಅನೇಕ ಬಾರಿ ಪ್ರೇಂ ತಮ್ಮ ಆಶಯ ಮುಂದೆ ಇಟ್ಟರು ಸಹ ಸುದೀಪ್ ನಾ ಒಲ್ಲೆ ಎಂದು ಹೇಳಿದ್ದರಂತೆ. ಆದರೆ ಮೊಟ್ಟ ಮೊದಲ ಬಾರಿಗೆ ಸುದೀಪ್ ಪ್ರೇಂ ಅವರ ಬಹು ನಿರೀಕ್ಷಿತ ಚಿತ್ರ ಡಿಕೆ ಗೆ ಕ್ಲಾಪ್ ಮಾಡಿ ಲಾಂಚ್ ಮಾಡಿದ್ದಾರೆ. ಮುಂದೆ ಅವರ ಚಿತ್ರದಲ್ಲಿ ನಟಿಸುವ ಸಾಧ್ಯತೆಯೂ ಇದೆ!

ವೆಬ್ದುನಿಯಾವನ್ನು ಓದಿ