ನಿಕೇಷ ಪಟೇಲ್ ಕಿಟ್ಟಿ ಮೊದಲ ಹೆಂಡತಿ...!

ಮಂಗಳವಾರ, 8 ಜುಲೈ 2014 (10:20 IST)
ಶ್ರೀನಗರ್ ಕಿಟ್ಟಿ ಮತ್ತು ನಿಕೇಷ ಪಟೇಲ್ ಈಗ ತಮ್ಮ ಹೊಚ್ಚ ಹೊಸ ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಈಗ ಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ಶ್ರೀನಗರ್ ಕಿಟ್ಟಿಗೆ ಸಾಕಷ್ಟು ಅವಕಾಶಗಳು ಹಾಗೂ ಒಂದಷ್ಟು ಗೆಲುವುಗಳು ಕೈ ಜೋಡಿಸಿವೆ. ಪ್ರಸ್ತುತ ರವಿ ಗರಣಿ ಅವರ ನಿರ್ಮಾಣದ ಚಿತ್ರ ನಮಸ್ತೆ ಮೇಡಂ ನಲ್ಲಿ ಬ್ಯುಸಿ ಆಗಿದ್ದಾರೆ ಕಿಟ್ಟಿ.  
 
ಚಿತ್ರಕ್ಕೆ ಸಂಬಂಧಪಟ್ಟಂತೆ ಈ ಜೋಡಿ ತಮ್ಮ ಪ್ರತಿಭೆ ತೋರಿದ್ದಾರೆ . ಇದು ತೆಲುಗು ಮಿಸ್ಸಮ್ಮ ಚಿತ್ರದ ರೀಮೇಕ್ ಆಗಿದೆ.
 
......ಇನ್ನು ಇದೆ. ಮುಂದೆ ಓದಿ 
 
 

ಈ ಚಿತ್ರದಲ್ಲಿ ನಿಕೇಷ ಪಟೇಲ್ ಕಿಟ್ಟಿಯ ಪತ್ನಿ ಪಾತ್ರದಲ್ಲಿ ನಟಿಸುತ್ತಾ ಇದ್ದಾರೆ. ಗಂಡ ಹೆಂಡತಿಯರ ಪ್ರಣಯ ದೃಶ್ಯಗಳನ್ನು ಈಗ ಚಿತ್ರೀಕರಿಸಿಕೊಂಡಿದ್ದಾರೆ . ಈ ಚಿತ್ರಕ್ಕೆ ಪೂರಕವಾದ ಮಸಾಲೆಗಳ ಚಿತ್ರೀಕರಣ ಸಹ ಆಗಿದೆ.
 
ಮೇಡಮ್ಮಳ ಮತ್ತೊಂದು ಆಕರ್ಷಣೆ ಕನ್ನಡದ ಸೆಕ್ಸಿ ನಟಿ ರಾಗಿಣಿ ದ್ವಿವೇದಿ. ಆಕೆಯು ಕಿಟ್ಟಿ ಯ ಮತ್ತೊಂದು ನಾಯಕಿಯಾಗಿದ್ದಾಳೆ. ಇದರಲ್ಲಿ ನೀರಿನ ಹಾಸಿಗೆಯ ಮೇಲೆ ರಾಗಿಣಿ ಮತ್ತು ಕಿಟ್ಟಿ ಪ್ರಣಯದಾಟದ ಹಾಡು ಮುಖ್ಯ ಹೈಲೈಟ್ ಆಗಿದೆ. ಸೊ ಅದನ್ನು ನೋಡಲು ಸ್ವಲ್ಪ ದಿನ ಕಾಯ ಬೇಕು! 

ವೆಬ್ದುನಿಯಾವನ್ನು ಓದಿ