ಈ ಗಲಾಟೆ ಇನ್ನು ತಣ್ಣಗೆ ಆಗಿಲ್ಲ, ಆಗಲೇ ಮತ್ತೊಂದು ಗಲಾಟೆಗೆ ಕಾರಣ ಆಗಿದೆ. ಆದರೆ ಇಲ್ಲಿ ಪಾತ್ರ ಬದಲಾಗಿದೆ ಮತ್ತು ಹೆಸರುಗಳು ! ಟಾಲಿವುಡ್ ನಲ್ಲಿ ಯೋಗ ಬ್ಯೂಟಿ ಎಂದು ಕರೆಸಿಕೊಳ್ಳುವ ಚೆಲುವೆ ಅನುಷ್ಕ ಶೆಟ್ಟಿ. ಆಕೆಯನ್ನು ಪ್ರಸಿದ್ಧ ಚಾನೆಲ್ ಒಂದು ಸಂದರ್ಶನ ಮಾಡಿತು.
ನಿಮ್ಮ ಮೆಚ್ಚಿನ ನಟರು ಯಾರು ಅಂದಾಗ ಆಕೆ ಹೃತಿಕ್ ರೋಷನ್, ಅಭಿಷೇಕ್ ಬಚ್ಚನ್, ಶಾರೂಖ್ ಖಾನ್ ಎನ್ನುವ ಹೆಸರುಗಳನ್ನು ಹೇಳಿದಳಂತೆ. ಇದರಿಂದ ಕುಪಿತರಾದರಂತೆ ತೆಲುಗು ಮಂದಿ.. ಯಾಕೆ ತಮಿಳು- ತೆಲುಗಲ್ಲಿ ಒಂದೂ ಹೀರೋ ಇಷ್ಟ ಆಗಲಿಲ್ಲವಾ ಎಂದು !
ಅಷ್ಟೇ ಅಲ್ಲದೆ ಈಗ ತಾನು ನಟಿಸುತ್ತಿರುವ ವಿಜಯ್, ಅಜಿತ್, ಸೂರ್ಯ, ವಿಕ್ರಮ್, ವೆಂಕಟೇಶ್, ನಾಗಾರ್ಜುನ, ವೆಂಕಟೇಶ್ , ಮಹೇಶ್ ಬಾಬು, ಪ್ರಭಾಸ್ ರಂತಹ ಹೀರೋಗಳ ಹೆಸರು ಹೇಳದೆ ಇನ್ನೂ ಒಂದೂ ಚಿತ್ರದಲ್ಲೂ ನಟಿಸದೇ ಇರುವ ಹೀರೋಗಳ ಹೆಸರು ಹೇಳಿದ ಕಾರಣ ಅವರುಗಳ ಅಭಿಮಾನಿಗಳು ಕೋಪಗೊಂಡು ತಮ್ಮ ಸೋಶಿಯಲ್ ನೆಟ್ ವರ್ಕ್ ಗಳಲ್ಲಿ ಅಭಿಪ್ರಾಯ ತೋರಿದ್ದಾರಂತೆ..