ಆರ್ಯನ್ -ಪವರ್ ಸ್ಟಾರ್ ಮೂಲಕ ಅಣ್ಣ ತಮ್ಮಂದಿರ ಪೈಪೋಟಿ ?

ಮಂಗಳವಾರ, 22 ಜುಲೈ 2014 (09:44 IST)
ಅಣ್ಣ ತಮ್ಮಂದಿರ ಕದನ ಅಂತ  ಹೇಳ್ತಾ ಇದ್ದರೇನೋ ಬೇರೆಯವರಿಗಾದರೆ, ಆದರೆ ಇದು ಕನ್ನಡ ಚಿತ್ರರಂಗದ ಹೆಮ್ಮೆಯ ವರನಟ ಡಾ. ರಾಜ್ ಕುಮಾರ್ ಅವರ ಕುಟುಂಬದ ಕುಡಿಗಳ ಚಿತ್ರ ಆದ ಕಾರಣ ಇದಕ್ಕೆ ಯಾವ ರೀತಿ ಹೆಸರಿಸ ಬೇಕೋ ತಿಳಿದಿಲ್ಲ ಅಂತಾನೆ ಹೇಳಬಹುದಾಗಿದೆ. 
 
ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹೊಚ್ಚ ಹೊಸ ಚಿತ್ರ ಆರ್ಯನ್ ಈಗ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹುನಿರೀಕ್ಷೆಯ ಪವರ್ ಚಿತ್ರವೂ ಸಹ ಬಿಡುಗಡೆಯ ಹಾದಿಯಲ್ಲಿದೆ. 
 
........ಇನ್ನು ಇದೆ. ಮುಂದೆ ಓದಿ. 
 
 

ಈ ಇಬ್ಬರ ಅಭಿಮಾನಿಗಳಿಗೆ ಫುಲ್ ಖುಷಿ ಆಗುವ ವಾತಾವರಣ ಈಗ  ಅಂದರೆ ಶ್ರಾವಣಮಾಸದಲ್ಲಿ ಕಲ್ಪಿತವಾಗಿದೆ ಎಂದೇ ಹೇಳ ಬಹುದಾಗಿದೆ.  ಚಿತ್ರಗಳು ಒಂದರ ಹಿಂದೆ ಅಂದ್ರೆ ಅಣ್ಣನ ಚಿತ್ರದ ರಿಲೀಸಿನ ಬಳಿಕ ತಮ್ಮನ ಸಿನ್ನಿಮಾ ರಿಲೀಸ್ ಆಗುತ್ತದೆ ಎನ್ನುವುದೇ ಸದ್ಯದ ಸುದ್ದಿ
 
 ಆರ್ಯನ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆ ರಮ್ಯ ನಟಿಸಿದ್ದಾರೆ, ಪವರ್ಸ್ಟಾರ್ ನಲ್ಲಿ ಪುನೀತ್ ಜೊತೆ ತ್ರಿಷಾ ಅಭಿನಯಿಸಿದ್ದಾಳೆ. ಒಟ್ಟಾರೆ ಅಣ್ಣ ತಮ್ಮನ ಈ ಚಿತ್ರಗಳು ಎಂತಹ ಹವಾ ಉಂಟು ಮಾಡುತ್ತದೆಯೋ ಬಾಕ್ಸಾಫೀಸಲ್ಲಿ ಎನ್ನುವ ಕುತೂಹಲ ಉಂಟಾಗಿದೆ ಎಲ್ಲರಲ್ಲೂ. 

ವೆಬ್ದುನಿಯಾವನ್ನು ಓದಿ