ಅತ್ತಾರಿಂಟಿಕಿ ದಾರೇದಿ ಎನ್ನುವ ಪ್ರಶ್ನೆ ಕೇಳಿದ್ದೆ ಬಂತು ಸುದೀಪ್ ಗೆ ಆ ದಾರಿಯನ್ನು ತೋರಿಸುವ ಒಬ್ಬ ಹೆಣ್ಣುಮಗಳು ಅವರ ಕಣ್ಣಿಗೆ ಕಾಣಲಿಲ್ಲ. ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಅತ್ತಾರಿಂಟಿಕಿ ದಾರೇದಿ ಸೂಪರ್ ಡೂಪರ್ ಕನ್ನಡ ಅವತರಣಿಕೆಯಲ್ಲಿ ಕಿಚ್ಚ ಸುದೀಪ್ ನಟಿಸುವ ಸುದ್ದಿ ಈಗಾಗಲೇ ಹಳೆಯದಾಗಿದ್ದರು ಸಹ ಅವರ ಜೊತೆ ಡ್ಯುಯೆಟ್ ಹಾಡಲು ಯಾರು ಬರ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ.