ವರಮಹಾಲಕ್ಷ್ಮಿ ಹಬ್ಬದಂದು ಸ್ಟೈಲ್ ಕಿಂಗ್ ಕೆಲಸ ಆರಂಭ

ಮಂಗಳವಾರ, 29 ಜುಲೈ 2014 (09:25 IST)
ಶ್ರಾವಣಮಾಸ. ಅನೇಕ ಸಂಭ್ರಮಗಳನ್ನು ಒಳಗೊಂಡ ಕಾರ್ಯಕ್ರಮಗಳು ಈಗ ನಡೆಯುತ್ತಿರುತ್ತವೆ. ಈ ತಿಂಗಳ  ಪೂರ ಹಬ್ಬಗಳ ಸಾಲು. ಅದೇರೀತಿ ಚಿತ್ರೋದ್ಯಮದಲ್ಲೂ ಸಹ ಚಟುವಟಿಕೆಯ ತಿಂಗಳಾಗಿದೆ. ವರಮಹಾಲಕ್ಷ್ಮಿ ಹಬ್ಬ ಆಗಸ್ಟ್ ತಿಂಗಳ 8  ರಂದು ನಡೆಯಲಿದೆ. ಅಂದು ಅನೇಕ ಚಿತ್ರಗಳು ಸೆಟ್ಟೇರುತ್ತಿವೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಹೊಚ್ಚಹೊಸ ಚಿತ್ರ ಪಿ ಸಿ ಶೇಖರ್ ಅವರ ನಿರ್ದೇಶನದ ಸ್ಟೈಲ್ ಕಿಂಗ್ ಅನ್ನುವ ಚಿತ್ರವು ಸಹ  ಸೆಟ್ಟೇರುತ್ತಿದೆ. ಈ ಸಂಗತಿಯನ್ನು ಮಾಧ್ಯಮಗಳ ಗಮನಕ್ಕೆ ತಂದಿದ್ದಾರೆ ಚಿತ್ರತಂಡ. 
 
ಗಣೇಶ್  ಈ ಚಿತ್ರದ ಫೋಟೋ  ಶೂಟ್ ನ್ನು   ಕಂಠೀರವ ಸ್ಟುಡಿಯೋದಲ್ಲಿ ಮಾಡಿಸಿಕೊಂಡರು. ಮುಹೂರ್ತ ದಿನ ನಿರ್ದೇಶಕ ಪಿ.ಸಿ ಶೇಖರ್ ಅವರು ಪ್ರೋಮೊವನ್ನು ಸಹ ಬಿಡುಗಡೆ ಮಾಡಿದರು.  
 
.......ಇನ್ನು ಇದೆ. ಮುಂದೆ ಓದಿ. 
 
 

ಈ ಚಿತ್ರದ ಹೀರೋಯಿನ್ ಇನ್ನು ನಿರ್ದೇಶಕರ ಕಣ್ಣಿಗೆ  ಬಿದ್ದಿಲ್ಲ. ಈ ಮೊದಲು ಶೇಖರ್   ಮತ್ತು ಗಣೇಶ್ ರೋಮಿಯೋ ಚಿತ್ರದ ಮುಖಾಂತರ ಒಂದಾಗಿದ್ದರು. ಆ ಚಿತ್ರವು ಹೇಳಿಕೊಳ್ಳುವಂತಹ ಯಶಸ್ಸು ಪಡೆದಿರಲಿಲ್ಲ. ಈಗ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ. ಈ ಜೋಡಿ ! 

ವೆಬ್ದುನಿಯಾವನ್ನು ಓದಿ