ಹರಿಪ್ರಿಯ ಸುದೀಪ್ ಅತ್ತ್ತೆ ಮನೆಯ ಸದಸ್ಯೆ ಆಗಿದ್ದಾರೆ

ಮಂಗಳವಾರ, 29 ಜುಲೈ 2014 (09:28 IST)
ಅತ್ತಾರಿಂಟಿಕಿ ದಾರೇದಿ  ಅಂತ ಕೇಳಿದ್ದೆ ಬಂತು ಸುದೀಪ್ ಗೆ ಮನದ ಅರಸಿ ಸಿಗಲೇ ಇಲ್ಲ. ಆದರೆ ಅಂತಿಮವಾಗಿ ಆ ಚಿತ್ರದಲ್ಲಿ ರಚಿತ ರಾಮ್ ನಟಿಸುವುದೆಂದು ನಿಶ್ಚಯ ಆಗಿದೆ. ರಚಿತ ಅಲ್ಲದೆ ಮತ್ತೊಂದು ಹೀರೋಯಿನ್ ಯಾರು ಎನ್ನುವ ಜನರ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಈ ಚಿತ್ರವನ್ನು ನಂದ ಕಿಶೋರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸುದೀಪ್ ಅವರ ಜೋಡಿಯಾಗಿ ಅವರು ಸಾಕಷ್ಟು ಹೆಣ್ಣುಮಕ್ಕಳನ್ನು ಗಮನದಲ್ಲಿ ಇಟ್ಟುಕೊಂಡಿದ್ದರು.ಆದರೆ ಅಂತಿಮವಾಗಿ ರಚಿತ ರಾಮ್ ಹಾಗೂ ಹರಿ ಪ್ರಿಯ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತೆಲುಗು ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆ ಸಮಂತ ಮತ್ತು ಪ್ರಣೀತ ಸುಭಾಶ್  ನಟಿಸಿದ್ದರು. 
 
.......ಇನ್ನು ಇದೆ. ಮುಂದೆ ಓದಿ. 
 
 

ರಚಿತ ಸಮಂತ ಮಾಡಿದ್ದ ರೋಲ್ ನಲ್ಲಿ ಮತ್ತು ಪ್ರಣೀತ ರೋಲ್ ನಲ್ಲಿ ಹರಿ ಪ್ರಿಯ ನಟಿಸುತ್ತಿದ್ದಾರೆ ಎನ್ನುವ ಮಾತನ್ನು ನಿರ್ದೇಶಕ ನಂದ ಕಿಶೋರ್ ಹೇಳಿದ್ದಾರೆ. ವಾಸ್ತುಪ್ರಕಾರ ಮತ್ತು ರಣವಿಕ್ರಮ  ಚಿತ್ರಗಳಿಂದ ಹೊರಬಂದ ರಚಿತಾಗೆ ಈ ಚಿತ್ರ ಸಿಕ್ಕಿದೆ. ಉಗ್ರಂ ಯಶಸ್ಸು ಹರಿಪ್ರಿಯಾಗೆ ಸುದೀಪ್ ಜೊತೆ ನಟಿಸುವ ಅವಕಾಶ ಕಲ್ಪಿಸಿ ಕೊಟ್ಟಿದೆ.

ವೆಬ್ದುನಿಯಾವನ್ನು ಓದಿ