ಬ್ಯಾಂಗ್ ಬ್ಯಾಂಗ್ ನಲ್ಲಿ ಸದ್ದು ಮಾಡುತ್ತಿದೆ ಹೃತಿಕ್ ಫೈಟ್ಸ್ ಕತ್ರಿನ ಬಿಕಿನಿ

ಮಂಗಳವಾರ, 29 ಜುಲೈ 2014 (09:31 IST)
ಧೂಮ್, ಕ್ರಿಶ್ ಬಳಿಕ ಸ್ಟಂಟ್ಸ್,  ಫೈಟ್ಸ್ ಗಳಿಗೆ ಆದ್ಯತೆ ಇರುವಂತಹ ಚಿತ್ರ ಬ್ಯಾಂಗ್ ಬ್ಯಾಂಗ್. ಈ ಚಿತ್ರದಲ್ಲಿ ಹೃತಿಕ್ ರೋಶನ್ ಮತ್ತು ಕತ್ರಿನಾ ಕೈಫ್ ಜೋಡಿ ಆಗಿದ್ದಾರೆ. ಈ ಚಿತ್ರದ ಟೀಸರ್ ಈಗ ಸಾಕಷ್ಟು ಸುದ್ದಿ ಮಾಡುತ್ತಿದೆ. ಬಾಲಿವುಡ್ ನಲ್ಲಿ ಈಗಂತೂ ಈ ಚಿತ್ರದ ಬಗ್ಗೆ ಸಾಕಷ್ಟು ಸುದ್ದಿ. ಒಂದು ಬಗೆಯಲ್ಲಿ ಹಾಲಿವುಡ್  ಚಿತ್ರಗಳ ರೇಂಜಿಗೆ ಇರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಕೇವಲ ಹಿಂದಿ ಭಾಷೆಯಲ್ಲಿ ಮಾತ್ರವಲ್ಲ, ದಕ್ಷಿಣ ಭಾರತ  ಭಾಷೆಗಳಾದ ತಮಿಳು, ತೆಲುಗು ಮತ್ತು ಮಲೆಯಾಳಂ ನಲ್ಲೂ ಸಹ ಈ ಚಿತ್ರವು ಬಿಡುಗಡೆ ಆಗುತ್ತಿದೆ. 
 
.......ಇನ್ನು ಇದೆ. ಮುಂದೆ ಓದಿ. 
 
 

ಕೇವಲ ಹೃತಿಕ್ ಮಾತ್ರವಲ್ಲ ಕತ್ರಿನಾ ಕೈಫ್ ಸಹ ಕೆಲವು  ಡೇರಿಂಗ್ ಸ್ಟಂಟ್ಸ್ ಮಾಡಿದ್ದಾಳೆ. ಇದೆ ಈ ಚಿತ್ರದ ಮತ್ತೊಂದು ಆಕರ್ಷಣೆ. ಕೇವಲ ತನ್ನ ರೂಪವನ್ನು ತೋರುತ್ತ  ಹಾಡುತ್ತ ಇರುವ ಪಾತ್ರಕ್ಕೆ ಆದ್ಯತೆ ನೀಡದೆ, ಹೊಸ ಪ್ರಯೋಗಕ್ಕೆ ಆಕೆ ಸಿದ್ಧಳಾಗಿದ್ದಾಳೆ. ಅಲ್ಲದೆ ಧೂಮ್ 2 ರಲ್ಲಿ ಐಶ್ವರ್ಯ ರಾಯ್, ಬಿಪಾಸ ಬಸು ಅವರು ಧರಿಸಿದ್ದಕ್ಕಿಂತ ವಿಭಿನ್ನವಾದ ಬಿಕಿನಿಯಲ್ಲಿ ಆಕೆ ತನ್ನ ರೂಪ ತೋರಿದ್ದಾಳೆ ಎನ್ನುವುದು ಈಗ ಈ ಚಿತ್ರದ ಬಗ್ಗೆ ಹರಡಿಸುವ ಸುದ್ದಿ.ಒಟ್ಟಾರೆ ವೀಕ್ಷಕರು ಏನು ನೋಡಲು ಹೋಗುತ್ತಾರೋ ಚಾಯ್ಸ್ ಅವರಿಗೆ ಬಿಟ್ಟಿದ್ದು.ಬ್ಯಾಂಗ್ ಬ್ಯಾನ್ ಮಾತ್ರ ಎಲ್ಲ ರೀತಿಯ ಮನೋರಂಜನೆಯನ್ನು ತನ್ನ ಜೊತೆಗಿಟ್ಟುಕೊಂಡು ಪ್ರದರ್ಶನ ನೀಡಲು ಸಿದ್ಧವಾಗಿದೆ ಅನ್ನೋದು ಸತ್ಯ !
 

ವೆಬ್ದುನಿಯಾವನ್ನು ಓದಿ