ಗೆಲುವನ್ನು ಜನರ ಗಮನವನ್ನು ತನ್ನತ್ತ ಸೆಳೆದ ನಟರಲ್ಲಿ ರಾಣ ಸಹ ಒಬ್ಬರು. ತಮ್ಮ ಲೀಡರ್ ಅನ್ನೋ ತೆಲುಗು ಚಿತ್ರದಲ್ಲಿ ನಟಿಸಿದ ಈ ಹೀರೋ ಬಾಲಿವುಡ್ ನಲ್ಲಿ ಎರಡನೇ ಚಿತ್ರವನ್ನು ನಟಿಸಿ ಆ ಮುಖಾಂತರ ಬಿ ಟೌನ್ ಕಡೆಗೂ ಎಂಟ್ರಿ ಆಗಿದ್ದರು. ಆದರೆ ಆತನ ಹಿಂದಿ ಚಿತ್ರ ಧಂ ಮಾರೋ ಧಂ ನಿರೀಕ್ಷಿಸಿದಂತಹ ಯಶಸ್ಸು ನೀಡಲಿಲ್ಲ , ಆದರೂ ಒಳ್ಳೆಯ ಕಲಾವಿದ ಎನ್ನುವ ಹೆಸರನ್ನು ಪಡೆದದ್ದು ಸುಳ್ಳಲ್ಲ . ಅದಾದ ಬಳಿಕ ಎ ಜವಾನಿ ಹೈ ದಿವಾನಿ ಎನ್ನುವ ಮಲ್ಟಿ ಸ್ಟಾರರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು ಈಗ ಮೂರನೇ ಮಲ್ಟಿ ಸ್ಟಾರರ್ ಚಿತ್ರದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಅವರಿಗೆ ಅಂತಹದ್ದೊಂದು ಆಹ್ವಾನ ಬಂದಿದೆ. .