ಕಿಚ್ಚ ಸುದೀಪ್ ರೀಮೇಕ್ ಚಿತ್ರದಲ್ಲಿ ಹರಿಪ್ರಿಯ ಬೆತ್ತಲೆ ?

ಬುಧವಾರ, 30 ಜುಲೈ 2014 (09:54 IST)
ಕಿಚ್ಚ ಸುದೀಪ್ ಅವರ ಬಹು ನಿರೀಕ್ಷೆಯ  ಚಿತ್ರ  ಅತ್ತಾರಿಂಟಿಕಿ ದಾರೇದಿ  ಕನ್ನಡ ರೀಮೇಕ್. ಪವನ್ ಕಲ್ಯಾಣ್ ನಟಿಸಿದ್ದ ಈ ಚಿತ್ರದಲ್ಲಿ ಸಮಂತ  ಮತ್ತು  ಪ್ರಣೀತ ಪವನ್ ಜೊತೆ ಆಗಿದ್ದರು. ಅದೇರೀತಿ ಈಗ ಸಿನಿಮಾ ಕನ್ನಡದಲ್ಲೂ ಸಿದ್ಧ ಆಗಲು ಅಗತ್ಯ ಇರುವ ಕೆಲಸಗಳು ನಡೆಯುತ್ತಿವೆ. ಈಗ ಈ ಚಿತ್ರದ ಕಾಸ್ಟಿಂಗ್ ಕೆಲಸ ಪೂರ್ಣ ಆಗಿದೆ. 
 
ರಚಿತ ರಾಮ್ ಮತ್ತು ಹರಿಪ್ರಿಯ ಸಿನಿಮಾದ ನಾಯಕಿಯರಾಗಿದ್ದಾರೆ. ಆರಂಭದಲ್ಲಿ ಸುದೀಪ್ ಅವರು ತೆಲುಗು ಸಿನಿಮಾದ ಹೀರೋಯಿನ್ ಗಳನ್ನೇ ಕನ್ನಡ ಚಿತ್ರಕ್ಕೂ ತೆಗೆದುಕೊಳ್ಳುವ ಉದ್ದೇಶ ಹೊಂದಿದ್ದರು. ಆದರೆ ಅವರ ಸಂಭಾವನೆ ಅತಿ ಹೆಚ್ಚು ಎಂದ ಕಾರಣ ಆ ಜಾಗಕ್ಕೆ ರಚಿತ ರಾಮ್ ಮತ್ತು ಹರಿಪ್ರಿಯ ಬಂದಿದ್ದಾರೆ. ಪ್ರಣೀತ ನಟಿಸುವ ರೋಲನ್ನು ಹರಿಪ್ರಿಯ ನಟಿಸುತ್ತಿದ್ದಾಳೆ. 
 
ಪ್ರಣೀತ   ಪಾತ್ರವು ಸಹ  ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿತ್ತು ಆ ಚಿತ್ರದಲ್ಲಿ  ಆದರಿಂದ ಈ ಸಿನಿಮಾದಲ್ಲಿ ಹರಿಪ್ರಿಯಾ ಪಾತ್ರವು ಹೆಚ್ಚು ಆದ್ಯತೆ ಗಳಿಸಿ  ಕೊಂಡಿದೆ ಎನ್ನುವುದನ್ನು ಬಿಡಿಸಿ ಹೇಳ ಬೇಕಿಲ್ಲ. ಆದರೆ ಈಗ ದೊರೆತಿರುವ ಸುದ್ದಿ ಏನೆಂದರೆ ಈ ಪಾತ್ರದಲ್ಲಿ ಆಗೇ ಅರೆ ನಗ್ನಳಾಗಿ ಕಾಣಿಸಿಕೊಳ್ಳಲು ಓಕೆ ಅಂದಿದ್ದಾಳೆ. 
 
 ............ಇನ್ನು ಇದೆ ಮುಂದೆ ಓದಿ. 
 
 
 

ಅದಕ್ಕಾಗಿ  ಒಂದು ಮೂಲದ ಪ್ರಕಾರ ತೆಗೆದುಕೊಳ್ಳುತ್ತಿರುವ ಸಂಭಾವನೆ 60  ಲಕ್ಷ ,ಈ ಚಿತ್ರದಲ್ಲಿ ಈಕೆ 30  ಸೆಕೆಂಡುಗಳ ಕಾಲ ಸೆಮಿ ನ್ಯೂಡ್ ಆಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ  ಈ ಪರಿ ಹಣ ಪಡೆಯುತ್ತಿದ್ದಾಳಂತೆ. 
 
ಈ ಹಿಂದೆ ಏಕೆ ನಟಿಸಿದ ಚಿತ್ರಗಳಿಗೆಂದು ಪಡೆದ ರೆಮ್ಯುನರೇಶನ್ 40 ಲಕ್ಷಗಳಿಗಿಂತ ಕಡಿಮೆ ಇದೆ, ಆದರೆ ಈ ಸಿನಿಮಾಕ್ಕೆಂದು ಆಕೆ ಏಕಾಏಕಿ ಅಷ್ಟು ಮೊತ್ತ ಹೆಚ್ಚಿಸಿದ್ದಾಳೆ ಅಂದ್ರೆ ಆ ಪಾತ್ರದ ಮಹತ್ವದ ಅರಿವು ನಿಮಗೆ ಆಗಿರಲೇ ಬೇಕು. ಈಗ  ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಆದ ಕಿಚ್ಚ ರಾಜ ಮೌಳಿ ಬಹುನಿರೀಕ್ಷಿತ ಚಿತ್ರ ಬಾಹುಬಲಿ ಯಲ್ಲೂ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.   

ವೆಬ್ದುನಿಯಾವನ್ನು ಓದಿ