ಕಟ್ಟೆಯಲ್ಲಿ ಅಪ್ಪನ ಜೊತೆ ಮಗಳು ಶ್ರಾವ್ಯ ಕೆಲಸ ಮಾಡಲು ಸಿದ್ಧತೆ ನಡೆಸಿದ್ದಾರೆ!

ಗುರುವಾರ, 31 ಜುಲೈ 2014 (09:57 IST)
ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ದೇಶಕರಲ್ಲಿ ಒಬ್ಬರಾಗಿರುವ ಓಂ ಪ್ರಕಾಶ್ ರಾವ್ ಅವರ ಪುತ್ರಿ ಶ್ರಾವ್ಯ ರಾವ್ ಈಗ ತಮ್ಮ ಅಪ್ಪ ಓಂ ಪ್ರಕಾಶ್ ರಾವ್ ಅವರ ಚಿತ್ರದಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾಳೆ. ಸಾಮಾನ್ಯವಾಗಿ ಮಾಧ್ಯಮಗಳ ಮುಂದೆ ಆಕೆ ತಾನು ಸ್ವಂತ ಬೆಳೆಯಲು ಇಷ್ಟ ಪಡುತ್ತೇನೆ, ಯಾರದೇ, ಯಾವುದೇ ಪ್ರಭಾವದಿಂದ ಅಲ್ಲ ಎನ್ನುವ ಸ್ಟೇಟ್ಮೆಂಟ್  ನೀಡುವುದು ಮಾತ್ರವಲ್ಲ, ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದಳು. ಇತ್ತೀಚಿಗೆ ಆಕೆ ಅಜಯ್ ರಾವ್ ಜೊತೆ ರೋಜ್ಚಿತ್ರದಲ್ಲಿ  ನಟಿಸಿದ್ದಳು. ಅದಾದ ಬಳಿಕ ಓಂ ಪ್ರಕಾಶ್ ರಾವ್ ಅವರ ನಿರ್ದೇಶನದಲ್ಲಿ ಹುಚ್ಚ 2  ಚಿತ್ರದಲ್ಲಿ ನಟಿಸುವ ಬಗ್ಗೆ ಸುದ್ದಿ ಇತ್ತಾದರೂ ಅದು ಹೆಚ್ಚು ಸದ್ದು ಮಾಡಲಿಲ್ಲ. ಈಗ ಮತ್ತೆ ತಂದೆ ಮಗಳು ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. 
 
ಕಟ್ಟೆ ಚಿತ್ರದಲ್ಲಿ  ತಮ್ಮ ತಂದೆಯ ನಿರ್ದೇಶನದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಹೆಚ್ಚು ಖುಷಿ ಆಗಿದೆ. ಮುಖ್ಯವಾಗಿ ಹೆಸರುವಾಸಿಯಾದ ನಿರ್ದೇಶಕರ ಕೈಕೆಳಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಅತ್ಯಂತ ಖುಷಿ ನೀಡಿದೆ ಎಂದಿದ್ದಾಳೆ ಶ್ರಾವ್ಯ
 
 
 
 ಕಟ್ಟೆ ಚಿತ್ರ ಮಲ್ಟಿ ಸ್ಟಾರ್ ಸಿನಿಮಾ ಆಗಿದೆ. ಇದರಲ್ಲಿ ನಾಗಶೇಖರ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಗ್ರಾಮೀಣ ಪ್ರದೇಶದ ವಾತಾವರಣ ಹೊಂದಿರುವ ಚಿತ್ರ ಇದಾಗಿದ್ದು ಹಾಸ್ಯಕ್ಕೆ ಹೆಚ್ಚು ಒಟ್ಟು ನೀಡಲಾಗಿದೆಯಂತೆ.
 
ನನ್ನ ಮಗಳು ಎನ್ನುವ ಕಾರಣಕ್ಕೆ ನಾನು  ಶ್ರಾವ್ಯಗೆ  ಚಿತ್ರದಲ್ಲಿ ನಟಿಸುವ ಅವಕಾಶ ನೀಡಲಿಲ್ಲ. ಆಕೆ ಈ ಪಾತ್ರಕ್ಕೆ ಹೊಂದುತ್ತಾಳೆ ಎನ್ನುವ ಕಾರಣದಿಂದ ಈ ನಿರ್ಧಾರಕ್ಕೆ ಬಂದೆ ಎಂದಿದ್ದಾರೆ. ಒಟ್ಟಾರೆ ಅಪ್ಪ- ಮಗಳನ್ನು ಕಟ್ಟೆ ಒಟ್ಟಿಗೆ ಕೆಲಸ ಮಾಡುವಂತೆ ಮಾಡಿದೆ. 

ವೆಬ್ದುನಿಯಾವನ್ನು ಓದಿ