ಚಿರಂಜೀವಿ ರೀಮೇಕ್ ಚಿತ್ರದಲ್ಲಿ ರಾಮ್ ಚರಣ್ ನಟನೆ

ಶುಕ್ರವಾರ, 1 ಆಗಸ್ಟ್ 2014 (10:16 IST)
ಟಾಲಿವುಡ್ ನಲ್ಲಿ ಅತ್ಯಂತ ಹೆಸರು ಪಡೆದ ಚಿತ್ರಗಳು ಅನೇಕ ಸಂಖ್ಯೆಯಲ್ಲಿ ಇವೆ. ಅವುಗಳಲ್ಲಿ ಕೆ. ರಾಘವೇಂದ್ರ ರಾವು ಅವರ ನಿರ್ದೇಶನದಲ್ಲಿ  ಅಶ್ವಿನಿ ದತ್ ಅವರ ನಿರ್ಮಾಣ ಮಾಡಿದ್ದ  ಜಗದೇಕ ವೀರುಡು ಅತಿಲೋಕ ಸುಂದರಿ ಚಿತ್ರವೂ ಸಹಿತ ಸೇರ್ಪಡೆ ಆಗುತ್ತದೆ. ಈ ಚಿತ್ರದಲ್ಲಿ ಚಿರಂಜೀವಿ  ಮತ್ತು ಶ್ರೀದೇವಿ ನಟಿಸಿದ್ದರು. 
 
ಚಿರಂಜೀವಿ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇತ್ತೋ ಅಷ್ಟೇ ರೇಂಜ್ ಹೊಂದಿತ್ತು ಶ್ರೀದೇವಿ  ಪಾತ್ರವು ಸಹಿತ! ಈಗ ಮತ್ತೆ ಆ ಚಿತ್ರವನ್ನು ಅಶ್ವಿನಿ ದತ್ ರೀಮೇಕ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಹಿಂದಿನ ಚಿತ್ರದಲ್ಲಿ ಶ್ರೀದೇವಿ ಪಾತ್ರವು ಎಲ್ಲರ ಗಮನ ಸೆಳೆದಿತ್ತು.
 
.........ಇನ್ನು ಇದೆ. ಮುಂದೆ ಓದಿ. 
 
 

 ಈ ರೀಮೇಕ್ ಚಿತ್ರದಲ್ಲಿ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಆತನಿಗೆ ಹೊಂದಿಕೆ ಆಗುವ ನಟಿಯ ಬಗ್ಗೆ ಹೆಚ್ಚು ಹುಡುಕಾಟ ನಡೆಸಲಾಗುತ್ತಿದೆ.  ಮೂಲ ಚಿತ್ರದಲ್ಲಿ  ಶ್ರೀದೇವಿ ರೇಂಜ್ ಸಕತ್ತಾಗಿತ್ತು. ಆದ ಕಾರಣ ಅಂತಹದ್ದೇ ಹೀರೋಯಿನ್ ಈ ರೀಮೇಕ್ ಸಿನಿಮಾಕ್ಕೂ ಸಹಿತ ಬೇಕಾಗಿದೆ. 
 
ಆದಕಾರಣ ಅವರು ಆ ರೀತಿಯ  ನಟಿಯ ಶೋಧನೆಯಲ್ಲಿ ನಿರತರಾಗಿದ್ದಾರೆ. ಪ್ರಸ್ತುತ ಆ ಪಟ್ಟಿಗೆ ತಮನ್ನ ಮತ್ತು ಸಮಂತ ಸೇರ್ಪಡೆ ಆಗಿದ್ದಾರೆ. ಅಂತಿಮವಾಗಿ ಈ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗುತ್ತದೆಯೋ ಅಥವಾ ಹೊಸಬರಿಗೋ .. ಈ ಪ್ರಾಜಕ್ಟ್ ಗೆ ಸಂಬಂಧ ಪಟ್ಟ ಸಂಗತಿಗಳನ್ನು ಅಧಿಕೃತವಾಗಿ  ಸಧ್ಯದಲ್ಲೇ ತಿಳಿಸ್ತಾರಂತೆ ಅಶ್ವಿನಿ ದತ್ !

ವೆಬ್ದುನಿಯಾವನ್ನು ಓದಿ