ಫೇರ್ ಅಂಡ್ ಲವ್ಲಿ ಯಲ್ಲಿ ವೇಶ್ಯೆ ಪಾತ್ರದಲ್ಲ್ಲಿ ಶ್ವೇತ ಶ್ರೀವಾತ್ಸವ್ ?

ಶನಿವಾರ, 2 ಆಗಸ್ಟ್ 2014 (10:54 IST)
ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ  ಚಿತ್ರದಲ್ಲಿ ತಾನು ಮಾಡಿದ ಅಪರೂಪದ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದ ನಟಿ   ಶ್ವೇತಾ ಶ್ರೀವಾತ್ಸವ್ಆ ಬಳಿಕ ಮನಸಾಕ್ಷಿ  ಚಿತ್ರದಲ್ಲಿ ನಟಿಸಿದರೂ ಸಹ ಅದು ಅವರಿಗೆ ಬ್ರೇಕ್ ಕೊಡಲಿಲ್ಲ. ಆದರೆ ಬಹಳ ದಿನಗಳ ಗ್ಯಾಪ್ ನಂತರ ಅವರು ಒಪ್ಪಿಕೊಂಡಿದ್ದು ಫೇರ್ ಅಂಡ್ ಲವ್ಲಿ. 
 
ಇದರಲ್ಲಿ ಶ್ವೇತಾ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಹಾಗಂತ ಒಂದು ಸುದ್ದಿಮೂಲ ತಿಳಿಸಿದೆ. ಆ ಕೊಳಚೆಯಲ್ಲಿ ಸಿಕ್ಕಿ ಹಾಕಿಕೊಂಡ ಹುಡುಗಿಯನ್ನು  ಪ್ರೇಮ್ ಅವರ ಪಾತ್ರ ಬಂದು ರಕ್ಷಿಸುತ್ತದೆ,  ಎಲ್ಲರಿಗೂ ತಿಳಿದಂತೆ ಆಮೇಲೆ ಅವರಿಬ್ಬರೂ ಪ್ರೇಮಿಗಳಾಗುತ್ತಾರೆ.ಸಾಮಾನ್ಯವಾಗಿ ಇಂತಹ ಪಾತ್ರಗಳು ಇರುವ , ಈ ರೀತಿಯ ಕಥೆಯನ್ನು ಹೊಂದಿರುವ ಚಿತ್ರಗಳು ಹೇರಳವಾಗಿ ಬಂದಿದೆ.
 
.........ಇನ್ನು ಇದೆ. ಮುಂದೆ ಓದಿ. 
 
 

ಅದೇರೀತಿ ಈಗ ರಮ್ಯ ನಟನೆಯ  ನೀರ್ದೋಸೆ , ಪೂಜಾಗಾಂಧಿ ನಟನೆಯ ತಿಪ್ಪಜ್ಜಿ ಸರ್ಕಲ್  ಚಿತ್ರಗಳಲ್ಲಿ ಈ ಅಭಿನೇತ್ರಿಗಳು  ವೇಶ್ಯೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಇನ್ನು ಸೆಟ್ಟೇರದ ಗುಲಾಬಿ ಸರ್ಕಲ್ ಚಿತ್ರದಲ್ಲಿ ಹರ್ಷಿಕ ಪೂಣಚ್ಚ ಸಹಿತ ಇಂತಹದ್ದೇ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಿದ್ಧತೆ ಮಾಡಿದ್ದಾಳೆ.  ಆದರೆ ಈ ಚಿತ್ರದಲ್ಲಿ ಶ್ವೇತ ಪಾತ್ರದ ಬಗ್ಗೆ ಚಿತ್ರತಂಡ ಯಾವುದೇ ಬಗೆಯ ಚಕಾರ ಎತ್ತಿಲ್ಲ. 
 
ಆರೀತಿ ಗುಟ್ಟಾಗಿ ಇಟ್ಟಿರುವ ಉದ್ದೇಶ ಏನಿರ ಬಹುದು ಎಂದು ಗಾಂಧಿನಗರಿಗರು ಚಿಂತಿತರಾಗಿದ್ದಾರೆ. ಏನೇ ಆದರು ಶ್ವೇತ ಅಭಿನಯದ ರುಚಿ ಕಂಡ ಕನ್ನಡಿಗರು ಆಕೆ ಯಾವ ಪಾತ್ರದಲ್ಲಿ ನಟಿಸಿದರೂ ಆಪ್ತವಾಗಿ ಸ್ವೀಕರಿಸುತ್ತಾರೆ ಎನ್ನುವುದು ಸತ್ಯ!

ವೆಬ್ದುನಿಯಾವನ್ನು ಓದಿ