ಲಿಂಗಾ ಚಿತ್ರದಲ್ಲಿ ತ್ರಿಷ ಐಟಂ ಸಾಂಗ್ ಬದಲಾಯ್ತು ತ್ರಿಷ ನಿರ್ಧಾರ...

ಮಂಗಳವಾರ, 12 ಆಗಸ್ಟ್ 2014 (09:45 IST)
ತ್ರಿಷ ಬಗ್ಗೆ ಕಳೆದ ಮೂರು ದಿನಗಳಿಂದ ಹೇಳುತ್ತಾ ಬಂದಿದ್ದೇವೆ. ಇಂದು ಮತ್ತೊಮ್ಮೆ ಆಕೆಯ ಬಗ್ಗೆ ವಿಶೇಷವಾದ ನ್ಯೂಸ್ ಇದೆ. ರಜನಿಕಾಂತ್, ಸೋನಾಕ್ಷಿ ಸಿನ್ಹ ಮತ್ತು ಅನುಷ್ಕ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ.  ಸಾಮಾನ್ಯವಾಗಿ ದುಡ್ಡು ಕೊಟ್ಟರೆ ಸಾಕು ತಾವು ಎಂತಹ ಪಾತ್ರಕ್ಕೂ ಸಿದ್ಧ ಅನ್ನುವ ಅನೇಕ ಕಲಾವಿದರು ಇದಾರೆ. ಆದರೆ ಕೆಲವರು ಕೆಲವುಬಗೆ ಪಾತ್ರಗಳನ್ನೂ ಬಿಟ್ಟು ಮತ್ಯಾವುದರತ್ತ ಗಮನ ನೀಡಲ್ಲ. ನಟಿ ತ್ರಿಷ ಸಹ ಹಾಗೆ ಆಕೆ ಐಟಂ ನಂಬರ್ ನಲ್ಲಿ ತಾನು ಕಾಣಿಸಿಕೊಳ್ಳುವುದೇ ಇಲ್ಲ ಎನ್ನುವ ಶಪಥ ಮಾಡಿದ್ದಳು . 
 
ಆದರೆ ಆಕೆಯ ಶಪಥ ರಜನಿ ಕಾಂತ್ ಮುರಿದಿದ್ದಾರೆ. ಅವರ ಹೊಸ ಚಿತ್ರ ಲಿಂಗದಲ್ಲಿ ತ್ರಿಷ ಐಟಂ ನಂಬರ್ ಮೂಲಕ ಎಲ್ಲರ ಮುಂದೆ ಬರಲಿದ್ದಾಳೆ. ಈಕೆಯ ಹಾಡಿನ ಸೆಟ್ ಗಾಗಿ ಸುಮಾರು ಮೂರುವರೆ ಕೋಟಿಗಳಷ್ಟು ಖರ್ಚು ಮಾಡ ಲಾಗಿದೆಯಂತೆ. ಸೊ ಈ ಮುಖಾಂತರ ಈಕೆ ಲಿಂಗದಲ್ಲಿ ಐಟಂ  ಹುಡುಗಿ ಆಗ್ತಾ ಇದ್ದಾಳೆ. ಆರಂಭದಿಂದಲೂ ತ್ರಿಷಗೆ ಈ ಚಿತ್ರದಲ್ಲಿ ನಟಿಸುವ ಆಸೆ ಇತ್ತು. ಆದರೆ ಆಕೆಯ ಆಸೆ ಅನುಷ್ಕ ಆಯ್ಕೆಯಿಂದ ದೂರಾಗಿತ್ತು. ಅಂತಿಮವಾಗಿ ಈ ಚಿತ್ರದಲ್ಲಿ ವಿಶೇಷ ಐಟಂ ನಂಬರ್ ಮಾಡುವ ಅವಕಾಶ ಸಿಕ್ಕಿದೆ. ಅನೇಕ ಹೆಸರುಗಳ ನಂತರ ತ್ರಿಷ ಹೆಸರು ಅಂತಿಮ ಆಯ್ತಂತೆ. ಅಲ್ಲದೆ  ಈಚಿತ್ರದಲ್ಲಿ ಸಿಕ್ಕಾಪಟ್ಟೆ ಖರ್ಚುಮಾಡಿ ಶಿವಲಿಂಗ ವನ್ನು ಸಹ ಸಿದ್ಧ ಮಾಡಲಾಗುತ್ತಿದೆಯಂತೆ ಕ್ಲೈಮ್ಯಾಕ್ಸ್ ಗಾಗಿ ! ಒಟ್ಟಾರೆ ತ್ರಿಷ  ಡ್ಯಾನ್ಸ್ ಹೆಚ್ಚು ಜನಪ್ರಿಯ ಆಗುತ್ತೆ ಎನ್ನುವ  ಸುದ್ದಿಯದ್ದೇ ಸದ್ದು ! 

ವೆಬ್ದುನಿಯಾವನ್ನು ಓದಿ