ಬಾಕ್ಸ್ ಆಫೀಸಿಗೆ 'ಕಿಕ್' ನೀಡುತ್ತಿರುವ ಕಿಕ್ ಕಲೆಕ್ಷನ್

ಸೋಮವಾರ, 18 ಆಗಸ್ಟ್ 2014 (10:25 IST)
ಭಾರತೀಯ  ಚಿತ್ರರಂಗದಲ್ಲಿ  ಅತ್ಯಧಿಕ ಕಲೆಕ್ಷನ್ ವಿಷಯದಲ್ಲಿ ತ್ರೀ ಇಡಿಯೇಟ್ಸ್  ಮತ್ತು ಚೆನ್ನೈ ಎಕ್ಸ್ಪ್ರೆಸ್  ಮುಂದೆ ಇತ್ತು. ಈಗ ಮತ್ತೊಂದು ಬ್ಲಾಕ್ ಬ್ಲಾಸ್ಟರ್ ಚಿತ್ರ ಮುಂದೆ ಇದೆ ಅದೇ ಸಲ್ಮಾನ್ ಖಾನ್ ಅವರ ನಟನೆಯ ಕಿಕ್.  ಜೈ  ಹೋ ಚಿತ್ರದಲ್ಲಿ ಹೇಳಿಕೊಳ್ಳುವಂತಹ ಗೆಲುವು ಕಾಣದ ಸಲ್ಮಾನ್ ಕಿಕ್ ಮೂಲಕ ಆ ಚಿತ್ರದ ಸೋಲಿಗೆ ಸರಿಯಾದ ಉತ್ತರ ನೀಡಿದ್ದಾರೆ. ಅವರ ಕಿಕ್ ಮೇಲಿನ ಆಕರ್ಷಣೆ ಇನ್ನು ಕಡಿಮೆ ಆಗಿಯೇ ಇಲ್ಲ ಎಂದೇ ಹೇಳ ಬಹುದಾಗಿದೆ. ಅತ್ಯಧಿಕ ಕಲೆಕ್ಷನ್ ಪಡೆಯುತ್ತಾ ರೆಕಾರ್ಡ್ ಮಾಡಿದೆ ಈ ಚಿತ್ರ.  ಇದು  ಭಾರತದ ಬಾಕ್ಸ್  ಆಫೀಸನ್ನು ಅಲುಗಾಡಿಸುತ್ತಿದೆ . 
 
ವಿಶ್ವ ವಿಡಿಈ ಚಿತ್ರ ಬಿಡುಗಡೆ ಆಗಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.ಸೂಪರ್ ಡೂಪರ್ ಕಲೆಕ್ಷನ್ ಪಡೆಯುತ್ತಿದೆ. ಈ ಮುಖಾಂತರ ಶಾರೂಕ್ ಖಾನ್ ಅವರ ಚೆನ್ನೈ ಎಕ್ಸ್ಪ್ರೆಸ್ ಚಿತ್ರದ  ನಂತರ ಕಿಕ್ ಚಿತ್ರ ಕ್ಕೆ ಒಳ್ಳೆಯ ಫಲಿತಾಂಶ ಸಿಕ್ಕಿದೆ. ಚೆನ್ನೈ ಎಕ್ಸ್ ಪ್ರೆಸ್ ಭಾರತದಲ್ಲಿ   226.70ಕೋಟಿ ಗಳಷ್ಟು  ಗಳಿಕೆ ಮಾಡಿತ್ತು. ಈಗ ಆ ದಾಖಲೆಯನ್ನು ಮುರಿದಿದೆ ಕಿಕ್. ಈವರೆಗೂ ಕಿಕ್ ಚಿತ್ರ ಭಾರತೀಯ ಮಾರುಕಟ್ಟೆಯಲ್ಲಿ 228 ಕೋಟಿಗಳಿಗಿಂತ ಆಧಿಕ ಮೊತ್ತ ಗಳಿಸಿದೆ. ತ್ರಿ ಇಡಿಯೇಟ್ಸ್  ನಂತರ ಅತ್ಯಧಿಕ ಹಣ ಗಳಿಕೆ ಮಾಡಿದ ಚಿತ್ರಗಳಲ್ಲಿ ಇದಕ್ಕೆ ಎರಡನೇ ಸ್ಥಾನ ಲಭ್ಯವಾಗಿದೆ. ಕಿಕ್ ಇಡಿ ಪ್ರಪಂಚದಲ್ಲಿ ಅದೂ 47 ದೇಶಗಳಲ್ಲಿ 5ಸಾವಿರ ಸ್ಕ್ರೀನ್ ಮೇಲೆ ರಿಲೀಸ್ ಆಗಿತ್ತು. 

ವೆಬ್ದುನಿಯಾವನ್ನು ಓದಿ