ಜೈಲು ಪಾಲದ ನಿರ್ದೇಶಕ ರೋಬೋ ಶಂಕರ್ .. ಆಗಿರುವುದಾದರೂ ಏನು ?

ಮಂಗಳವಾರ, 19 ಆಗಸ್ಟ್ 2014 (10:13 IST)
ಶಂಕರ್ ದಕ್ಷಿಣ ಭಾರತದ ವಿಭಿನ್ನ ನಿರ್ದೇಶಕ. 1990  ರಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಈ ಪ್ರತಿಭಾವಂತ ಅನೇಕ ಚಿತ್ರಗಳನ್ನು ನಿರ್ಮಿಸಿ ತಮ್ಮ ಚಿತ್ರಗಳನ್ನು ನೂರು ಕೋಟಿ ಕ್ಲಬ್ ಗೆ ಸೇರ್ಪಡೆ ಮಾಡಿದ ವಿಶೇಷ ಪ್ರತಿಭೆ. ಬಾಯ್ಸ್  ನಿಂದ  ಹಿಡಿದು ರೋಬೋ ತನಕ ತನ್ನದೇ ಆದ ವಿಶೇಷ ರೀತಿಯ ಅಂಶಗಳನ್ನು ಮತ್ತು ಭಿನ್ನತೆಯನ್ನು ಮೆರೆದ ಪ್ರತಿಭಾವಂತ ನಿರ್ದೇಶಕ ಶಂಕರ್.. 
 
ಇತ್ತೀಚಿಗೆ ಶಂಕರ್ ಅವರ ಹುಟ್ಟು ಹಬ್ಬದ ಆಚರಣೆ ಆಯಿತು. ಅಂದುಮೀಡಿಯಾ ಮುಂದೆ ನೀಡಿದ ಇಂಟರ್ವ್ಯೂ  ನಲ್ಲಿ ಯಾರಿಗೂ ತಿಳಿದಿಲ್ಲ ತಮ್ಮ ಬದುಕಿನಲ್ಲಿ ನಡೆದ  ಅನೇಕ ರಹಸ್ಯಗಳನ್ನು ತಿಳಿಸಿದರು.ಸಿನಿಮಾಕ್ಕೆ ಬರುವುದಕ್ಕೆ ಮುನ್ನ ಶಂಕರ್ ಚೆನ್ನೈ ನಲ್ಲಿ ವರ್ಲ್ಡ್ ಕಂಪನಿಯಲ್ಲಿ ಸಾಮಾನ್ಯ ನೌಕರಿ ಮಾಡುತ್ತಿದ್ದರಂತೆ. ಆಗಲೆವ್ ಕಾರ್ಮಿಕ ಸಂಘದಲ್ಲಿ ಭಾಗವಹಿಸಿ ಒಂದು ಗಲಭೆಯಲ್ಲಿ ಸಿಲುಕಿ ಮೂರು ದಿನಗಳ ಕಾಲ ಜೈಲಿನಲ್ಲಿ ಇದ್ದರಂತೆ. 
 
ನಿರ್ದೇಶಕರಾಗಿ ಸಾಕಷ್ಟು ಹೊಸತನ ತರುವ ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿ ಇದ್ದು, ತನ್ನ ಮನೆಯ ಕೋಣೆಯೊಂದರಲ್ಲಿ ರಿಸ್ಟ್ ವಾಚ್ ಗಳ ಮ್ಯೂಸಿಯಂ ಮಾಡಿದ್ದೇನೆ ಎಂದು ಹೇಳಿದ್ದಾರೆ ಶಂಕರ್. ನೂರಾರು ಕೋಟಿಗಳಷ್ಟು ಬೆಲೆಯ ಚಿತ್ರ ನಿರ್ಮಿಸುವ ತನಗೆ ಇನ್ನು ಯಾವ ಉಡುಪು ಸೆಲೆಕ್ಟ್ ಮಾಡಿಕೊಳ್ಳ ಬೇಕು ಎನ್ನುವುದು ಗೊತ್ತಿಲ್ಲ ಅದನ್ನು ತನ್ನ ಪತ್ನಿಯೇ ಆಯ್ಕೆ ಮಾಡುತ್ತಾಳೆ ಎಂದು ತಮ್ಮ ಅಸಹಾಯಕತೆಯನ್ನು  ಮಾಧ್ಯಮದ ಮುಂದೆ ಇಟ್ಟಿದ್ದಾರೆ ಶಂಕರ್. ಸದಾ ಸಿಗರೇಟ್ ಸೇದೋ  ಅಭ್ಯಾಸವನ್ನು ಯಾವ ರೀತಿ  ದೂರ ಮಾಡಿಕೊಳ್ಳ ಬೇಕು ಎನ್ನುವ ಬಗ್ಗೆ ತನಗೆ ರಜನಿಕಾಂತ್ ಅವರು ಸಲಹೆ ನೀಡಿದರು ಎನ್ನುವ ಸಂಗತಿಯನ್ನು ಈ ಸಮಯದಲ್ಲಿ ನೆನಪಿಸಿಕೊಂಡರು ಶಂಕರ್ . 

ವೆಬ್ದುನಿಯಾವನ್ನು ಓದಿ