ಆಮೀರ್ ಖಾನ್ ಪೀಕೆ ಬೆತ್ತಲೆ ಪ್ರಕರಣದ ಇಂದು ವಿಚಾರಣೆ

ಮಂಗಳವಾರ, 19 ಆಗಸ್ಟ್ 2014 (10:16 IST)
ಬಾಲಿವುಡ್ ನಲ್ಲಿ ಸ್ವಲ್ಪ ಜಾಸ್ತಿನೆ ಸುದ್ದಿ ಮಾಡುತ್ತಿರುವ ಚಿತ್ರ ಅಂದ್ರೆ ಕಿಕ್. ಆಮೀರ್ ಖಾನ್ ಅವರ ಇನ್ನು ಬಿಡುಗಡೆ ಆಗದ ಆ ಚಿತ್ರದಲ್ಲಿ ಆಮೀರ್ ಬೆತ್ತಲೆ ಆಗಿರೋದು ಎಲ್ಲರಲ್ಲೂ ಸಂಚಲನ, ಕೋಪ ಮತ್ತು ಇನ್ನು ಏನೇನೋ ಉಂಟು ಮಾಡಿದೆ ಎಂದೇ ಹೇಳ ಬಹುದಾಗಿದೆ. ಪೀಕೆ ಚಿತ್ರದಲ್ಲಿ ಅವರು ಒಂದು ಟ್ರಾನ್ಸಿಸ್ಟರ್ ಹಿಡಿದು ನಿಂತಿರುವ ಚಿತ್ರವೂ ಕಳೆದ ಕೆಲವು ದಿನಗಳಿಂದ ಸಾಕಷ್ಟು ಸುದ್ದಿ ಮಾಡುತ್ತಿದೆ. ಅದಕ್ಕೆ ಸಂಬಂಧಪಟ್ಟಂತೆ ಅವರ ಈ ಬೆತ್ತಲೆ ಸೇವೆಗೆಂದು ಕೋರ್ಟ್ ನಲ್ಲಿ ಕೇಸನ್ನು ದಾಖಲು ಮಾಡಿದ್ದರು. ಅದರ ವಿಚಾರಣೆ ಕೋರ್ಟ್ ನಲ್ಲಿ  ಇಂದು ನಡೆಯಲಿದೆ.
 
 ಪೀಕೆ ಚಿತ್ರದಲ್ಲಿ ಇರುವ ಅಶ್ಲೀಲ  ಪೋಸ್ಟರ್ ತೆಗೆದು ಬಿಡ ಬೇಕು ಎನ್ನುವ ಗಲಾಟೆ ದೇಶವ್ಯಾಪಿ ಆಗಿದ್ದು, ಆ ಬಗ್ಗೆ ಸಮಾಜ ಸೇವಕ ಹೇಮಂತ್ ಪಾಟೀಲ್ ದಾಖಲು ಮಾಡಿದ ಪಿಟಿಷನ್ ನ್ನು ಇಂದು ಕೋರ್ಟ್ ವಿಚಾರಣೆ ನಡೆಸಲಿದೆ. ಈ ಕೇಸ್ ನಲ್ಲಿ ಆಮೀರ್ ಖಾನ್, ನಿರ್ಮಾಪಕ ವಿದೂ ವಿನೂ ಚೋಪ್ರ, ನಿರ್ದೇಶಕ ರಾಜ್ ಕುಮಾರ್ ಹಿರಾನಿ , ಸೆನ್ಸಾರ್ ಬೋರ್ಡ್ ನವರನ್ನು ಸಹಿತ ಇದಕ್ಕೆ ಪೂರಕ ಉತ್ತರ ನೀಡುವಂತೆ ಆಜ್ಞೆ ನೀಡಿದೆ ಕೋರ್ಟ್. 
 
ಅಶ್ಲೀಲವಾಗಿ, ನಗ್ನವಾಗಿ ಜನರ ಭಾವನೆಗಳ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡಿದ್ದಾರೆ ಎನ್ನುವುದು ಪಿಟಿಷನ್ ನಲ್ಲಿ ಇರುವ ಮುಖ್ಯ ಸಂಗತಿ ಆಗಿದೆ. ಸತ್ಯಮೇವ   ಜಯತೆ ಮೂಲಕ ಕ್ಲೀನ್ ಇಮೇಜ್ ಸಂಪಾದಿಸಿದ ಆಮೀರ್ ಖಾನ್ ಈಗ, ಹೀಗೆ ಈ ರೀತಿ ಯಾಕೆ ಹೀಗಾದರು ಎಂದೆಲ್ಲ ಬೇಜಾರಾಗಿ ಕೋರ್ಟ್ ಸಹಾಯ ಪಡೆದಿದ್ದಾರೆ ಸಮಾಜ ಸೇವಕರು. ದೇಶದ ದೃಷ್ಟಿಯೆಲ್ಲ ಪೀಕೆಯತ್ತಲೆ ಇರುವುದರಿಂದ ಕೋರ್ಟ್ ಎಂತಹ ತೀರ್ಪು ನೀಡುತ್ತದೆ ಎನ್ನುವುದೇ ಸಧ್ಯದ ಪ್ರಶ್ನೆ.

ವೆಬ್ದುನಿಯಾವನ್ನು ಓದಿ