ಥಗ್ಸ್ ಆಫ್ ಮಾಲ್ಗುಡೀಸ್ ನಲ್ಲಿ ಕಿಚ್ಚ ಸುದೀಪ್ ಡಕಾಯಿತ ನಾಯಕ ?

ಬುಧವಾರ, 20 ಆಗಸ್ಟ್ 2014 (10:15 IST)
ರಕ್ಷಿತ್ ಚಂಬಲ್ ಕಣಿವೆಯ ಡಕಾಯಿತ ನಾಯಕ ಪಾತ್ರವನ್ನು ಕಿಚ್ಚ ಸುದೀಪ್ ಗೆ ತಮ್ಮ ಹೊಸ ಚಿತ್ರದಲ್ಲಿ  ನೀಡುತ್ತಿದ್ದಾರೆ. ರಕ್ಷಿತ್ ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ತಮಗೆ ಯಾವ ರೀತಿಯ ಪಾತ್ರ ನೀಡುತ್ತೀರಿ ಎನ್ನುವ ಮಾತನ್ನು ಬಿಗ್ ಬಾಸ್ ಗೆ ರಕ್ಷಿತ್ ಹೋಗಿದ್ದ ಸಮಯದಲ್ಲಿ ಕಿಚ್ಚ ಕೇಳಿದ್ದರು. ಆಗ ಅವರು ಚಂಬಲ್ ಕಣಿವೆಯ ನಾಯಕಕ್ನ ಪಾತ್ರ ನೀಡುತ್ತೇನೆ ಎಂದಿದ್ದರು. ಅದು ಎಷ್ಟರ ಮಟ್ಟಿಗೆ ಸತ್ಯ ಸಂಗತಿ ಆದೀತು ಎಂದು ತಿಳಿದಿದ್ದರು  ಸಿನಿಮಂದಿ. ಆದರೆ ರಕ್ಷಿತ್ ಹೇಳಿದ ಮಾತು ತಪ್ಪಿಲ್ಲ. ಅಂತಹ ಪಾತ್ರದ ಸಿದ್ಧ ನಡೆದ್ದಾರೆ.  ಪ್ರಸ್ತುತ ರಕ್ಷಿತ್ ಅನೇಕ ಚಿತ್ರಗಳ ಹೀರೋ ಆಗಿದ್ದಾರೆ. ಅವೆಲ್ಲ ಮುಗಿದ ಬಳಿಕ ಖಂಡಿತವಾಗಿ ಅವರು ತಮ್ಮ ಕನಸಿನ ನಿರ್ದೇಶನದ ಚಿತ್ರ ಕೈಗೆ ಎತ್ತಿಕೊಳ್ಳುವ ಸಾಧ್ಯತೆ ಹೇರಳವಾಗಿದೆ.
 
ಮುಂದಿನ ವರ್ಷ ಇದೇ ಸಮಯಕ್ಕೆ ಚಿತ್ರ  ಮುಹೂರ್ತ ಕಾಣುವ ಮತ್ತು ಶೂಟಿಂಗ್ ನಡೆಸುವ ಸಾಧ್ಯತೆಗಳಿವೆ.  ಸುದೀಪ್ ಅವರನ್ನು ಗಮನದಲ್ಲಿಟ್ಟುಕೊಂಡು ಕಥೆ ಸಿದ್ಧಪಡಿಸಿಕೊಳ್ಳುತ್ತಿರುವ ರಕ್ಷಿತ್ ಶೆಟ್ಟಿ ಸದ್ಯ ಆ ಚಿತ್ರಕ್ಕೆ ಥಗ್ಸ್ ಆಫ್ ಮಾಲ್ಗುಡೀಸ್ ಎಂದು ಹೆಸರಿಟ್ಟಿದ್ದಾರೆ. ಆದರೆ ಇದೆ ಟೈಟಲ್  ಇರುತ್ತೆ ಎಂದೂ ಸಹ ಹೇಳೋಕೆ ಆಗಲ್ಲ.  ಸ್ವಾತಂತ್ರ್ಯಪೂರ್ವದಲ್ಲಿ ಮಾಲ್ಗುಡಿ ಎಂಬಲ್ಲಿ ನಡೆಯುವ ಒಂದು ಕಾಲ್ಪನಿಕ ಕಥೆಯನ್ನು ಹೆಣೆಯುತ್ತಿದ್ದಾರೆ ರಕ್ಷಿತ್. 'ಥಗ್ಸ್ ಆಫ್ ಮಾಲ್ಗುಡೀಸ್' ಬಗ್ಗೆ ಉಳಿದ ಅಂಶಗಳು ಅಂತಿಮವಾಗಿಲ್ಲ.  ಈಗಷ್ಟೇ  ಯೋಗರಾಜ್ ಭಟ್ಟರ ವಾಸ್ತುಪ್ರಕಾರದಲ್ಲಿ ನಟಿಸಿರುವ ರಕ್ಷಿತ್  ರಿಕ್ಕಿ ಚಿತ್ರದಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾರೆ. ಈಗ ಕೈಲಿ ಇರುವ ಕೆಲಸಗಳು ಪೂರ್ಣ ಆದ ಬಳಿಕ ಅವರು  ಥಗ್ಸ್ ಆಫ್ ಮಾಲ್ಗುಡೀಸ್ ಮೂಲಕ  ಡೈರೆಕ್ಟರ್ ಸೀಟ್ ನಲ್ಲಿ ವೀರಾಜಮಾನರಾಗುತ್ತಾರೆ ಎಂದು ನಂಬಲಾಗಿದೆ. 

ವೆಬ್ದುನಿಯಾವನ್ನು ಓದಿ