ರಾಜಮೌಳಿ ಬಾಹುಬಲಿ ಶಂಕರ್ ರೋಬೋ ವನ್ನು ಮೀರಿಸುತ್ತದೆಯಂತೆ.. ಹೇಗೆ ಗೊತ್ತೇ ??

ಬುಧವಾರ, 20 ಆಗಸ್ಟ್ 2014 (10:21 IST)
ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಅದ್ಧೂರಿ ಚಿತ್ರ ಬಾಹುಬಲಿ. ಈ ಚಿತ್ರದಲ್ಲಿ ಪ್ರಭಾಸ್ ಮತ್ತು ಅನುಷ್ಕ ಮುಖ್ಯ ಪಾತ್ರಧಾರಿ ಆಗಿದ್ದಾರೆ. ಈ ಚಿತ್ರ ಬಿಡುಗಡೆ ಆದ ಬಳಿಕ ರೆಕಾರ್ಡ್ ನಿರ್ಮಿಸುತ್ತದೆ  ಎಂದು ನಂಬಲಾಗಿದೆ. ಮುಖ್ಯವಾಗಿ ರಜನಿಕಾಂತ್ ನಟನೆಯ ಶಂಕರ್ ನಿರ್ದೇಶನದ ರೋಬೋ ಚಿತ್ರದ ಗಳಿಕೆಯನ್ನು ಇದು ಮೀರಿಸುತ್ತದೆ ಎಂದು ನಂಬಲಾಗಿದೆ. ಈ ಚಿತ್ರ ನಿರ್ಮಾಣ ರಂಗದಲ್ಲೇ ಅತಿ ದೊಡ್ಡ ಬ್ಯುಸಿನೆಸ್  ನೀಡುತ್ತದೆ ಎಂದು ನಂಬಲಾಗಿದೆ. ಈವರೆಗೂ ಎಲ್ಲ ಭಾಗಗಳಲ್ಲೂ   ನಡೆದ ಬ್ಯುಸಿನೆಸ್ ಪ್ರಕ್ರಿಯೆ  ಸುಮಾರು 79   ಕೋಟಿ ರೂಪಾಯಿಗಳನ್ನು ಮೀರಿದೆ ಎನ್ನುವ ಸುದ್ದಿ ಇದೆ. ಇನ್ನು ಅನೇಕ ಸ್ಥಳಗಳಿಗೆ ಹಕ್ಕುಗಳನ್ನು ಮಾರುವ ಪ್ರಕ್ರಿಯೆ ಸಾಗಿದೆ. 
 
ಒಂದು ಥಿಯೇಟರ್ ಹಕ್ಕೆ ಸುಮಾರು 105  ರೂಪಾಯಿಗಳಷ್ಟು ಇದೆ ಎಂದು ಚಿತ್ರಪಂಡಿತರು ಲೆಕ್ಕ ಹಾಕಿದ್ದಾರೆ.ಎಲ್ಲವನ್ನು ಗಮನವಿಟ್ಟು ಗುಣಿಸಿ ಭಾಗಿಸಿ ಕೂಡಿ ಕಳೆದಾಗ ರೂಬೋ ಚಿತ್ರಕ್ಕಿಂತ ಬಾಹುಬಲಿ ಚಿತ್ರದ ಗಳಿಕೆ-ರೆಕಾರ್ಡ್ ಎಲ್ಲವು ಮುಂದೆ ಇರುತ್ತದೆ ಎನ್ನುವ ಸಂಗತಿ  ಬಹುತೇಕ ಖಚಿತವಾಗಿದೆ. ಆರ್ಕ ಮೀಡಿಯಾ ವರ್ಕ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಪ್ರಭಾಸ್ , ರಾಣ, ಅನುಷ್ಕ, ತಮನ್ನ, ಸುದೀಪ್, ಪ್ರಕಾಶ್ ರಾಜ್, ರಮ್ಯ ಕೃಷ್ಣ, ನಾಜಿರ್ ಮುಂತಾದವರು ನಟಿಸುತ್ತಿದ್ದಾರೆ. ಇದು ತಮಿಳು ಮತ್ತು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಮುಂದಿನ ವರ್ಷ ಎಪ್ರಿಲ್ ನಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ.  

ವೆಬ್ದುನಿಯಾವನ್ನು ಓದಿ