ಅಕ್ಷರ ಹಾಸನ್ ತನ್ನ ಮೊದಲ ಚಿತ್ರದಲ್ಲಿ ಪಡೆದ ಸಂಭಾವನೆ ಎಷ್ಟು ಗೊತ್ತೆ?

ಗುರುವಾರ, 21 ಆಗಸ್ಟ್ 2014 (10:07 IST)
ಕಮಲ್ ಹಾಸನ್ ಭಾರತ ಟಾಪ್ ಹೀರೋ ಗಳಲ್ಲಿ ಒಬ್ಬರು. ಅವರ ಇಬ್ಬರು ಹೆಣ್ಣು ಮಕ್ಕಳು ಈಗ ಚಿತ್ರರಂಗಕ್ಕೆ ಬಂದಿದ್ದಾರೆ. ಕಮಲ್ ಕಿರಿಯ ಮಗಳು ಅಕ್ಷರ. ಆಕೆ ಈಗ ಅಮಿತಾಬ್ ಬಚ್ಚನ್ ಮತ್ತು ರಜನಿಕಾಂತ್ ಅಳಿಯ ಧನುಶ್ ಅವರ ನಟನೆಯ ಶಮಿತಾಬ್ ಅನ್ನುವ ಬಾಲಿವುಡ್ ಚಿತ್ರದ ಮೂಲಕ ತಾರಾ ರಂಗಕ್ಕೆ ಎಂಟ್ರಿ ಆಗುತ್ತಿದ್ದಾಳೆ. ಈ ಮುದ್ದಾದ ಚೆಲುವೆಯು ಆರಂಭಿಕ ಹಂತದಲ್ಲೇ  ಅತ್ಯುತ್ತಮ ಟೀಂ ಜೊತೆ ಕೆಲಸ ಮಾಡುವ ಅವಕಾಶ ಪಡೆದಿದ್ದಾಳೆ. ಆರ್ ಭಾಲ್ಕಿ ಅವರ ನಿರ್ದೇಶನದ ಈ ಚಿತ್ರವೂ ಅನೇಕ ನಿರೀಕ್ಷೆಗಳನ್ನು ಹೊಂದಿದೆ. ಈ ಚಿತ್ರದಲ್ಲಿ ನಟಿಸುತ್ತಿರುವ ಅಕ್ಷರ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಕೇಳಿ ಬಂದಿವೆ. 
 
ಅಕಸ್ಮಾತ್ ಈ ಸಿನಿಮಾ ಗೆದ್ದರೆ ಅಕ್ಷರ ಬದುಕು ಸುಂದರ ಆಗುತ್ತದೆ, ಇಲ್ಲದೆ ಇದ್ದರೆ ಆಕೆಯ ತಾರ ಬದುಕಲ್ಲಿ ಹೊಸ ತಿರುವಿಗಾಗಿ ಕಾಯುವ ಪರಿಸ್ಥಿತಿ ನಿಶ್ಚಿತ . ಮುಖ್ಯವಾಗಿ ಈ ಚೆಲುವೆ ತನ್ನ ಅಕ್ಕನಂತೆ ಈಗ ಅತ್ಯುತ್ತಮ ಸ್ಥಾನ ಪಡೆಯಲು ಅಗತ್ಯ ಇರುವ ಕಡೆ ಗಮನ ನೆಡುತ್ತಿದ್ದಾಳೆ. ಆರಂಭಿಕ ಹಂತದಲ್ಲಿ ಶ್ರುತಿ ಹಾಸನ್ ಸಹ ಫ್ಲಾಪ್ ಚಿತ್ರಗಳನ್ನು   ನೀಡಿದ್ದಳು. ಆದರೆ ಈಗ ಆಕೆ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬಳಾಗಿದ್ದಾಳೆ. ಅಲ್ಲದೆ ಈಗ  ಕೇವಲ ಬಾಲಿವುಡ್ ಮಾತ್ರವಲ್ಲ ದಕ್ಷಿಣ ಭಾರತದ ಸಿನಿಮಾಗಳಲ್ಲೂ ತನ್ನನ್ನು ತೊಡಗಿಸಿ ಕೊಂಡಿದ್ದಾಳೆ. ಅಂದಂಗೆ ಶಮಿತಾಬ್ ಚಿತ್ರದಲ್ಲಿ ನಟಿಸಲು ಅಕ್ಷರ ಪಡೆದ ಸಂಭಾವನೆ ಕೇವಲ ಐದು ಲಕ್ಷ ರೂಪಾಯಿಗಳು ಮಾತ್ರ! ಈ ಮುಖಾಂತರ ಹೊಸ ರೀತಿಯಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾಳೆ. ವೆಬ್ ದುನಿಯಾದಿಂದ  ಆಕೆಗೆ ಗುಡ್ ಲಕ್ ! 

ವೆಬ್ದುನಿಯಾವನ್ನು ಓದಿ