ಮೆಟ್ರೋ ರೈಲಿನಲ್ಲಿ ಧೀರ ರಣವಿಕ್ರಮ... ಸಿನಿಮಾಗಳಲ್ಲಿ ಮೆಟ್ರೋ ವೈಭವ !

ಶುಕ್ರವಾರ, 22 ಆಗಸ್ಟ್ 2014 (10:14 IST)
ಕೇವಲ ಜನರ ಸೌಕರ್ಯಕ್ಕಾಗಿ ಮಾತ್ರವಲ್ಲ ಚಿತ್ರಮಂದಿಯ ಸೇವೆಗೂ ಸಹಿತ ನಮ್ಮ ಮೆಟ್ರೋ ಸಿದ್ಧ ಆಗುತ್ತಿದೆ. ಎಂಜಿ ರಸ್ತೆಯಲ್ಲಿರುವ ಮೆಟ್ರೋ ಮಂದಿ ಬಳಿ ತಮ್ಮ ಚಿತ್ರ ನಮ್ಮಣ್ಣ ಡಾನ್ ಚಿತ್ರದ ಆಡಿಯೋ ಬಿಡುಗಡೆಯ ಸಂದರ್ಭದಲ್ಲಿ  ಅಲ್ಲಿ ಸ್ಥಳಾವಕಾಶ ಕೇಳಿದ್ದರು ನಟ ನಿರ್ದೇಶಕ ರಮೇಶ್ ಅರವಿಂದ್, ಆದರೆ ಇದಕ್ಕೆ ಆಗ ಮೆಟ್ರೋ ಮಂದಿ ಸಮ್ಮತಿ ನೀಡಿರಲಿಲ್ಲ. ಆದರೆ ಕೇವಲ ಪ್ರಯಾಣಿಕರಿಂದ ಮಾತ್ರವಲ್ಲ, ಮತ್ತೊಂದು ರೀತಿಯಿಂದಲೂ ರೆವಿನ್ಯೂ ಗಳಿಕೆ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ  ಮೆಟ್ರೋ  ಮಂದಿ. ಇದರ ಫಲಿತಾಂಶವೇ ಈಗ ಚಿತ್ರದ ನಿರ್ದೇಶನ ಮಾಡಲು ಮೆಟ್ರೋದಲ್ಲಿ ಸ್ಥಳವನ್ನು ಬಾಡಿಗೆಗೆ  ನೀಡುವುದಾಗಿದೆ.
 
ಪುನೀತ್ ಅವರ ನಟನೆಯ ಪವನ್ ವಡೆಯರ್ ನಿರ್ದೇಶನದ ಚಿತ್ರ ಧೀರ ರಣ ವಿಕ್ರಮ. ಈ ಚಿತ್ರದ ಶೂಟಿಂಗ್ ನಮ್ಮ ಮೆಟ್ರೋದಲ್ಲಿ ಮಾಡಲಾಗುತ್ತಿದೆ. ಗಂಟೆ ಒಂದಕ್ಕೆ  45ಸಾವಿರ ರೂಪಾಯಿ ನೀಡಿ ನಾಲ್ಕು ಗಂಟೆಗಳ ಕಾಲ ಆ ಸ್ಥಳ ಬಳಸಿಕೊಳ್ಳುತ್ತಿದ್ದಾರೆ. ಬೇರೆ ರೈಲು ನಿಲ್ದಾಣದ ಜಾಗಕ್ಕೆ  ಗಂಟೆಗೆ 75 ಸಾವಿರ ನೀಡಬೇಕು. ತಮ್ಮ ಚಿತ್ರಗಳನ್ನು  ಮೆಟ್ರೋದಲ್ಲಿ ಚಿತ್ರಿಸಲು ಅನೇಕ ಚಿತ್ರಗಳು ಕಾಯುತ್ತಿವೆ. ಸಧ್ಯಕ್ಕೆ ರಣವಿಕ್ರಮ ಮೊದಲ ಸ್ಥಾನ ಪಡೆದಿರೋದು ಪವರ್ ಮಹಿಮೆ ಎಂದೇ ಹೇಳ ಬಹುದಾಗಿದೆ.  

ವೆಬ್ದುನಿಯಾವನ್ನು ಓದಿ