ಶಿಂಬು ಬಗ್ಗೆ ನಾನು ಸತ್ಯ ಹೇಳಿದರೆ ಆತ ಹರ್ಟ್ ಆಗ್ತಾನೆ -ಹನ್ಸಿಕ

ಶುಕ್ರವಾರ, 22 ಆಗಸ್ಟ್ 2014 (10:36 IST)
ನಯನತಾರ ಶಿಂಬು ಪ್ರೀತಿಸಿ ಬಿಟ್ಟಿದ್ದು ಆಯ್ತು. ಅದಾದ ಬಳಿಕ ಹನ್ಸಿಕಾ ಜೊತೆ ಆತ ತನ್ನ ಪ್ರೇಮಾಯಣ  ಆರಂಭ ಮಾಡಿದ. ಅವರಿಬ್ಬರೂ ಅದೆಷ್ಟು ಪ್ರೀತಿಸಿದರು ಎಂದರೆ, ಇನ್ನೇನು ಮದುವೆ ಆಗಿಯೇ ಹೋಗುತ್ತಾರೆ ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಹಾಗೆ ಆಗಲಿಲ್ಲ. ಬದಲಾಗಿ ಈ ಜೋಡಿ ಪ್ರೀತಿಯ ಬ್ರೇಕ್ ಅಪ್ ನಿಂದ ಬಳಲಿತು. ಆದರೆ ಹನ್ಸಿಕ ಅದನ್ನೇ ಮನದಲ್ಲಿ ಇಟ್ಟುಕೊಂಡು ಕೂರದೆ ತನ್ನ ವೃತ್ತಿ ಕಡೆಗೆ ಹೆಚ್ಚು ಗಮನ ನೀಡಿ, ಮತ್ತಷ್ಟು ಗ್ಲಾಮರ್ ಬೊಂಬೆ ಆದಳು ಹಾಗು ಹೆಚ್ಚು ಸಕ್ಸಸ್ ಕೊಟ್ಟು ಕಾಲಿವುಡ್ ನ ನಂಬರ್ ಒನ್ ತಾರೆ ಪಟ್ಟವನ್ನು ಜೀವಂತವಾಗಿ ಇಟ್ಟುಕೊಂಡಳು. 
 
ಆದರೆ ಏನಾಯಿತೋ ಏನೋ ಕೆಲವು ದಿನಗಳ ಹಿಂದೆ ಹನ್ಸಿಕ ಕಾಲಿವುಡ್ ನ ಪತ್ರಿಕೆ ಒಂದಕ್ಕೆ ಸಂದರ್ಶನ ನೀಡುವಾಗ ಅವರು ಶಿಂಬು ಬಗ್ಗೆ ಕೇಳಿದ ಪ್ರಶ್ನೆಗೆ ಕಾರವಾಗಿ ಉತ್ತರಿಸಿ ಮತ್ತೆ ಎಲ್ಲರ ಗಮನ ಆ ವಿಷಯದತ್ತ ಹೊರಳುವಂತೆ ಮಾಡಿದ್ದಾಳೆ. 
 
ತಮ್ಮ ಮುರಿದು ಬಿದ್ದ ಸಂಬಂಧದ ಬಗ್ಗೆ ಈಗ ಹೇಳೋಕೆ ಏನೂ ಉಳಿದಿಲ್ಲ. ಇಂತಹ ವ್ಯವಹಾರಗಳಲ್ಲಿ  ಇಬ್ಬರಲ್ಲಿ ಯಾರಾದರು ಒಬ್ಬರು ಮೌನವಾಗಿ ಇರುವುದು ಎಲ್ಲ ರೀತಿಯಿಂದಲೂ  ಸೂಕ್ತ. ನಾನೇನಾದರು ಈ ವಿಷಯಕ್ಕೆ ಸಂಬಂಧಪಟ್ಟಂತೆ ಸತ್ಯ ಬಿಚ್ಚಿಟ್ಟರೆ ಶಿಂಬುಗೆ ಹರ್ಟ್ ಆಗೋದು ನಿಜ, ನನ್ನ ಲವ್ ಬ್ರೇಕ್ ಅಪ್ ಆದರೂ ಸಹಿತ ಶಿಂಬು ಬದುಕು ಚೆನ್ನಾಗಿರಲಿ ಎಂದು ನಾನು ಸದಾ ಬಯಸುತ್ತೇನೆ. ನನ್ನ ಕಡೆ ಯಾರಾದರೂ ಒಂದು ಬೆರಳು ತೋರಿಸಿದರೆ ನಾನು ಮೂರು ಬೆರಳನ್ನು  ತೋರಿಸುತ್ತೇನೆ ಎಂದು ಹೇಳಿದ್ದಾಳೆ ಈ ಭಾಮೆ. ಇದು ಸದ್ಯಕ್ಕೆ ಕಾಲಿವುಡ್ ಮಂದಿಯ ಹಾಟ್ ಟಾಪಿಕ್ ಆಗಿದೆ.  

ವೆಬ್ದುನಿಯಾವನ್ನು ಓದಿ