ಪುನಿತ್ ರಾಜ್ ಕುಮಾರ್ ಗೆ ಹುಷಾರಿಲ್ಲ ಆಸ್ಪತ್ರೆಗೆ ದಾಖಲಾದ ಪವರ್ ಸ್ಟಾರ್ ?

ಶನಿವಾರ, 23 ಆಗಸ್ಟ್ 2014 (10:06 IST)
ಪುನಿತ್ ರಾಜ್ ಕುಮಾರ್ ಗೆ ಹುಷಾರಿಲ್ಲ  ಆಸ್ಪತ್ರೆಗೆ ದಾಖಲಾದ ಪವರ್  ಸ್ಟಾರ್ .. ಈ ಶೀರ್ಷಿಕೆ   ಓದಿ ಏನೇನೋ ಯೋಚಿಸುವ ಅಗತ್ಯವಿಲ್ಲಾ. ಏಕೆಂದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೊಚ್ಚ ಹೊಸ ಚಿತ್ರ ರಣವಿಕ್ರಮ ಚಿತ್ರದ ಶೂಟಿಂಗ್ ನ ಕೆಲವು ಸನ್ನಿವೇಶಗಳನ್ನು ಬೆಂಗಳೂರು ನಗರದ ಪ್ರಸಿದ್ಧ ಆಸ್ಪತ್ರೆಯಲ್ಲಿ ಚಿತ್ರೀಕರಿಸಲಾಯಿತು. 
 
ಈ ಚಿತ್ರದಲ್ಲಿ ಅದ ಶರ್ಮ  ಜೊತೆ ನಟಿಸುತ್ತಿರುವ  ಪುನೀತ್ ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ   ಆಕೆಯ ಜೊತೆ ಅಭಿನಯಿಸಿದ ಕೆಲವು ಸನ್ನಿವೇಶಗಳನ್ನು ಸಹ ಚಿತ್ರೀಕರಣ ಮಾಡಲಾಯಿತು.ಈ ನಟಿ ಇತ್ತೀಚೆಗಷ್ಟೇ ಬಿಡುಗಡೆ ಆದ  ಹಸಿ ತು ಫಸಿ ಎನ್ನುವ ಚಿತ್ರದಲ್ಲಿ ನಟಿಸಿದ್ದಾಳೆ. ಪರಿಣಿತಿ ಚೋಪ್ರ ಮತ್ತು ಸಿದ್ಧಾರ್ಥ್ ಮಲ್ಹೋತ್ರ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. 
 
ಪ್ರಸ್ತುತ  ಪುನೀತ್ ಅವರು  ಪವರ್ ಸ್ಟಾರ್ ಚಿತ್ರಕ್ಕೆ ಏರ್ಪಟ್ಟಿರುವ  ಸಮಸ್ಯೆ ನಿವಾರಣೆಯತ್ತ ತಮ್ಮ ಚಿತ್ತ ನೆಟ್ಟಿದ್ದಾರೆ . ಪವರ್ ಚಿತ್ರದಲ್ಲಿ ತ್ರಿಷಾ ಕೃಷ್ಣನ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಬಹು ನಿರೀಕ್ಷಿತ ಈ ಚಿತ್ರವನ್ನು ವೀಕ್ಷಿಸಲು ಪುನೀತ್ ಅಭಿಮಾನಿಗಳು ಕಾಯುತ್ತಿದ್ದಾರೆ, ಆದರೆ ಅದರ ಬಿಡುಗಡೆಗೆ ಆ ಚಿತ್ರದ ಟೈಟಲ್  ವಿವಾದ ಅಡ್ಡಿ ಆಗಿದೆ. 

ವೆಬ್ದುನಿಯಾವನ್ನು ಓದಿ