ಹೆಸರಲ್ಲೇನಿದೆ.. ನಯನತಾರ ಹೆಸರಲ್ಲಿ ಮಾತ್ರ ಅದೃಷ್ಟ ಇದೆ !

ಶನಿವಾರ, 23 ಆಗಸ್ಟ್ 2014 (10:18 IST)
ಗ್ಲಾಮರ್ ಲೋಕದಲ್ಲಿ ಹಂಗಾಮ ಮಾಡುತ್ತಿರುವ ನಟೀಮಣಿಗಳಲ್ಲಿ  ನಯನತಾರ ಸಹ ಒಬ್ಬಾಕೆ. ಆಕೆ ತನ್ನ ಅಭಿನಯ, ಗ್ಲಾಮರ್ ಮತ್ತು ಪ್ರೇಮ ಕಥೆಯಿಂದ ಸಹಿತ ಅತಿ ಹೆಚ್ಚು ಚಾಲ್ತಿಯಲ್ಲಿ ಇರುವ ನಟಿ. ಕಾಲಿವುಡ್ , ಟಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ನಟಿಸಿರುವ ಈ ತಾರೆಯ ನಿಜವಾದ  ಹೆಸರು ಮತ್ತು ಆ ಹೆಸರು ಬದಲಾದ ರಹಸ್ಯ ಸಂಗತಿ ಇಂದು ನಿಮ್ಮ ಮುಂದೆ ಇಡ್ತಾ ಇದ್ದಿವಿ.ನಯನತಾರ ಮೂಲ ನಾಮಧೇಯ ಡಯಾನ ಮರಿಯಮ್ ಕುರಿಯನ್ ಆಕೆ ಜನ್ಮಸ್ಥಳ ಕೇರಳ. ಆದರೆ ಯಶಸ್ವಿ ಆಗಿರೋದು ತಮಿಳು ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ . 
 
ನಯನ ನಟಿಸಿದ ಮೊದಲ ಚಿತ್ರ  ಮನಸ್ಸಿನಕ್ಕರೆ ಎನ್ನುವ ಸಿನಿಮಾದ ನಿರ್ದೇಶಕ ಸತ್ಯನ್ . ಆತ ಆಕೆಯ ಹೆಸರನ್ನು  ನಯನ್  ಎಂದು ಬದಲಾಯಿಸಿಕೊಳ್ಳುವಂತೆ ಹೇಳಿದರು. ಆದರೆ ತನಗೆ ಯಾವ ಹೆಸರು ಇಟ್ಟುಕೊಳ್ಳಬೇಕು ಎನ್ನುವುದು ತಿಳಿಯದ ಗೊಂದಲ ಇದೆ ಎನ್ನುವ ಮಾತು ಆಕೆ ಹೇಳಿದ್ದಳು. ಆಗ ನಿರ್ದೇಶಕರು 30  ಹೆಸರು ಚೀಟಿಗಳಲ್ಲಿ  ಬರೆದು  ಬೋಲ್ ನಲ್ಲಿ ಹಾಕಿದರಂತೆ.   
 
ಆ  ಬೌಲ್ ನಲ್ಲಿ ಇರುವ ಸ್ಲಿಪ್ ನಲ್ಲಿ ಒಂದನ್ನು  ತೆಗೆಯುವಂತೆ ಅಂದಿನ ನಯನ್  ಗೆ   ಸತ್ಯನ್ ಹೇಳಿದರು. ಅವರು ತಿಳಿಸಿದಂತೆ ಮಾಡಿದಾಗ ಅಲ್ಲಿ ನಯನತಾರ ಅನ್ನುವ ಹೆಸರು  ದೊರಕಿತಂತೆ. ಈ ಹೆಸರು  ವಿಚಿತ್ರ ಎಂದು ಅನ್ನಿಸಿ ಅದರ ಬಗ್ಗೆ ಆಕೆ ನಿರ್ದೇಶಕರ ಬಳಿ ಕೇಳಿದಳಂತೆ ಇದು ನನಗೆ ಹೊಂದುತ್ತದೆಯೇ ಎಂದು . ಈ ಹೆಸರು ನಿನಗೆ ಹೊಂದುತ್ತದೆ ಎಂದು ಹೇಳಿದರೂ ಸಹ  ಆಕೆ ಆ ಹೆಸರನ್ನು ಅನೇಕ ದಿನಗಳ ಕಾಲ ಯಾರ ಮುಂದೆಯೂ ಸಹ ತಿಳಿಸಲೇ ಇಲ್ಲ ವಂತೆ. ಆದರೆ ಆಕೆಯು ಈಗ ದಕ್ಷಿಣ ಭಾರತದ ತಾರಾಲೋಕದ ತಾರೆ ಆಗಿದ್ದಾಳೆ. ಡಯಾನ  ಹೆಸರು ಮರೆತು ಹೋಗುವಷ್ಟು ಬೆಳೆದಿದ್ದಾಳೆ. 

ವೆಬ್ದುನಿಯಾವನ್ನು ಓದಿ