ಅಮಿತಾಬ್ ಬಚ್ಚನ್ ದೀಪಿಕಾ ಪಡುಕೋಣೆ ರನ್ನು ಶೇಕ್ ಮಾಡಿದ ಹಾಡು..

ಶನಿವಾರ, 30 ಆಗಸ್ಟ್ 2014 (09:27 IST)
ಸಧ್ಯದಲ್ಲೇ ಬಿಡುಗಡೆ ಆಗಲಿರುವ ಚಿತ್ರ ಫೈಂಡಿಂಗ್ ಫ್ಯಾನಿ. ಈ ಚಿತ್ರದಲೋ ದೀಪಿಕಾ ಪಡುಕೋಣೆ ಮತ್ತು ಅರ್ಜುನ್ ಕಪೂರ್ ಅಲ್ಲದೆ ಹಿರಿಯ ಕಲಾವಿದರಾದ ನಸುರುದ್ದೀನ್ ಷಾ, ಡಿಂಪಲ್ ಕಪಾಡಿಯಾ, ಪಂಕಜ್ ಕಪೂರ್ ಮುಖ್ಯ ಪಾತ್ರಧಾರಿ ಆಗಿದ್ದಾರೆ. ಆದರೆ ಈ  ಸಿನಿಮಾದಲ್ಲಿ ಮತ್ತೊಂದು ವಿಶೇಷವಾದ ಸಂಗತಿ ಇದೆ. ಇದರಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಸಹ ಇನ್ವಾಲ್ವ್ ಆಗಿದ್ದಾರೆ. ಅಂದರೆ ಈ ಸಿನಿಮಾದಲ್ಲಿ ತಮ್ಮ ಅಭಿನಯ ಸಾಮರ್ಥ್ಯ ತೋರಿದ್ದಾರೆ ಅವರು. 
 
ಷೇಕ್ ಯುವರ್ ಬುಟಿಯಾ  ಅನ್ನುವ ಒಂದು ಹಾಡಲ್ಲಿ ಅಮಿತಾಬ್ ಬಚ್ಚನ್ ದೀಪಿಕ ಪಡುಕೋಣೆ ಮತ್ತು ಅರ್ಜುನ್ ಕಪೂರ್ ಅವರ ಜೊತೆಗೂಡಿ ಡ್ಯಾನ್ಸ್ ಮಾಡಿದ್ದಾರೆ. ಈಗ ಆ ಹಾಡು ಯುವ ಜನತೆಯನ್ನು ಸಕತ್ ಆಕರ್ಷಿಸುತ್ತಿದೆ. ಶೇಕ್ ಯುವರ್ ಬುಟಿಯಾ  71  ರ ಹರೆಯದ ಅಮಿತಾಬ್ ಅವರನ್ನು ಸಕತ್ ಆಕರ್ಷಿಸಿದೆ . ಇತ್ತೀಚಿಗೆ ತಮ್ಮ ಬ್ಲಾಗ್ ನಲ್ಲಿ ಆ ಬರೆದುಕೊಂಡು ಫೋಟೋಗಳನ್ನು ಹಾಕಿದ್ದಾರೆ ಬಿಗ್ ಬಿ. ಈ ಚಿತ್ರ  ಸೆಪ್ಟೆಂಬರ್ 12  ಬಿಡುಗಡೆ ಆಗಲಿದೆ. 

ವೆಬ್ದುನಿಯಾವನ್ನು ಓದಿ