ಡಾ. ಶಿವರಾಜ್ ಕುಮಾರ್ ಜೊತೆ ಐಶ್ವರ್ಯ ರೈ ನಟನೆ ?

ಸೋಮವಾರ, 1 ಸೆಪ್ಟಂಬರ್ 2014 (09:23 IST)
ಸಾಮಾನ್ಯವಾಗಿ ಜಾಹೀರಾತುಗಳಲ್ಲಿ ಸಿನಿ ಚಿತ್ರ ಕಲಾವಿದರು ಕಂಡು ಬರೋದು ಒಂದು ಸರಳ ಸಾಧಾರಣ ಸಂಗತಿ. ಯಾವುದೇ ಚಿತ್ರರಂಗ ಆಗಿರಲಿ  ಕಲಾವಿದರು ತಮ್ಮನ್ನು ಕಮರ್ಷಿಯಲ್ ಆಡ್ ನಲ್ಲಿ ತೊಡಗಿಸಿ ಕೊಳ್ಳುತ್ತಾರೆ. ಭಾರತದಂತಹ ದೇಶಗಳಲ್ಲಿ ಎಲ್ಲಾ ಸಂಗತಿಗಳ ಜೊತೆಗೆ ಚಿನ್ನದ ವ್ಯಾಪಾರಕ್ಕೂ  ಸಹಿತ ಹೆಚ್ಚಿನ ಬೆಲೆ ಇದೆ.ಅಂತಹ ಪಟ್ಟಿಯಲ್ಲಿ ಕಲ್ಯಾಣ್ ಜ್ಯುಯೆಲರ್ಸ್ ಅವರ ಚಿನ್ನದ ಮಾರುಕಟ್ಟೆಗೂ ಸಹಿತ ಹೆಚ್ಚಿನ ಬೆಲೆಯಿದೆ.ಟೀವಿ ಚಾನೆಲ್ಸ್ ಗಳು ಈ ಆಡ್ ಪ್ರದರ್ಶನ ಮಾಡುತ್ತಲೇ ಇರುತ್ತಾರೆ.  ಬಾಲಿವುಡ್ ನಲ್ಲಿ ಈ ಆಭರಣಗಳ  ಜಾಹಿರಾತಿನಲ್ಲಿ ಐಶ್ವರ್ಯ ರೈ ನಟಿಸಿದ್ದಾರೆ ದಕ್ಷಿಣದಲ್ಲಿ ಅದರಲ್ಲೂ ಕನ್ನಡ ದಲ್ಲಿ  ಡಾ. ಶಿವರಾಜ್ ಕುಮಾರ್  ಅವರು ಒಟ್ಟಾಗಿ ನಟಿಸಿದ್ದಾರೆ. ಈ ಮುಖಾಂತರ ಈ ತಾರೆಯರು ಗ್ರಾಹಕರಿಗೆ ಕಲ್ಯಾಣ್ ಜ್ಯುಯಲರ್ಸ್  ಬೆಸ್ಟೂ .. ಭಲೆ ಬೆಸ್ಟೂ  ಅದನ್ನೇ ಕೊಳ್ಳಿ ಎಂದು ಹೇಳುತ್ತಾರೆ. 
 
ಅನೇಕ ದಿನಗಳಿಂದ ಐಶ್ ಮತ್ತು ಶಿವಣ್ಣ ಒಟ್ಟಾಗಿ ನಟಿಸುತ್ತಾರೆ ಎನ್ನುವ ಸುದ್ದಿ ಇತ್ತು. ಅದು ಈಗ ನಿಜ ಆಗುವ ಸಮಯ ಬಂದಿದೆ. ಅವರಿಬ್ಬರೂ ಚಿತ್ರದಲ್ಲಿ ಒಟ್ಟಿಗೆ ನಟಿಸದೆ ಇದ್ದರೂ ಸಹಿತ ಕಲ್ಯಾಣ್ ಜ್ಯುಯೆಲರ್ಸ್ ನಲ್ಲಿ ಒಟ್ಟಾಗಿ ನಟಿಸಿ ಕನ್ನಡಿಗರ ಮನೆಗಳಿಗೆ ಬಂದು ಮನ ರಂಜಿಸ ಬಹುದೆಂಬ ಸುದ್ದಿ ಹರಡಿದೆ. ಅದು ಸಾಧ್ಯ ಆಗುವ ಚಾನ್ಸ್ ಹೆಚ್ಚಿದೆ.. ಮಂಗಳೂರಿನ ಮೂಲದ ಬೆಡಗಿ ಐಶ್ ಗೆ ಕನ್ನಡದಲ್ಲಿ ನಟಿಸಲು ಕಷ್ಟ ಆಗಲ್ಲ, ಆದರೆ ಚಿತ್ರದಲ್ಲಿ ಅಲ್ಲದೆ ಇದ್ರೂ ಸಹಿತ ಆಕೆ ಜಾಹೀರಾತಿನ ಮೂಲಕವಾದರೂ ಕನ್ನಡದವರೊಂದಿಗೆ ನಟಿಸಲಿ ಎನ್ನುವುದು ಕನ್ನಡಿಗರ ಆಶಯ!  

ವೆಬ್ದುನಿಯಾವನ್ನು ಓದಿ