ಶಿಷ್ಯ ರಘುರಾಜ್ ಗಾಗಿ ಹಿಟ್ಲರ್ ಆಗ್ತಾ ಇದ್ದಾರೆ ನಿರ್ದೇಶಕ ಪ್ರೇಂ ...

ಬುಧವಾರ, 3 ಸೆಪ್ಟಂಬರ್ 2014 (09:04 IST)
ತಮ್ಮ ಶಿಷ್ಯಂದಿರಿಗಾಗಿ ಏನು ಬೇಕಾದರೂ ಸಹಾಯ ಮಾಡಲು ಸಿದ್ಧ ಆಗಿರ್ತಾರೆ ಗುರುಗಳು . ಸಿನಿಮಾರಂಗದಲ್ಲಿ ನಟರು  ಸಹ ಇದಕ್ಕೆ ಹೊರತಲ್ಲ. ರಘು ಹಾಸನ್  ನಿರ್ದೇಶಕ- ನಟ ಪ್ರೇಂ ಅವರ ಶಿಷ್ಯ. ರಘು ಹಾಸನ್ ಅವರು 11 ಗಳಿಂದ ಅಂದರೆ  ಕರಿಯ ಚಿತ್ರದಿಂದ  ರಾಜ್ ದಿ ಶೋ ಮ್ಯಾನ್ ತನಕ ಪ್ರೇಮ್  ಜೊತೆ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಈಗ ರಘು ತಮ್ಮ ಗುರುವನ್ನು ಹಿಟ್ಲರ್ ಮಾಡುತ್ತಿದ್ದಾರೆ.   ಹುಚ್ಚು ಹುಡುಗ್ರು ಸಿನೆಮಕ್ಕೆ ಚಿತ್ರಕಥೆ ಸಂಭಾಷಣೆ  ಹೊಣೆ ಹೊತ್ತಿದ್ದ ರಘು ಹಿಟ್ಲರ್ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ.
 
ವೇದ ಮೂರ್ತಿ ಹಾಗೂ ಆರ್ ಜೆ ಸ್ಟುಡಿಯೋ ಒಟ್ಟಾಗಿ ನಿರ್ಮಾಣ ಮಾಡಲಿರುವ ಚಿತ್ರವೂ ಅಕ್ಟೋಬರ್ ತಿಂಗಳಿನಲ್ಲಿ ಪ್ರಾರಂಭವಾಗಲಿದೆ. ತಾಯಿಯ ಪಾತ್ರಕ್ಕೆ ಅರುಂಧತಿ ನಾಗ್ ,ಡಾಕ್ಟರ್ ಭಾರತಿ ವಿಷ್ಣುವರ್ಧನ್ ಅಥವಾ ಆರತಿ ಅವರು ಆದರೆ ಸೂಕ್ತ ಎನ್ನುವ ಅಭಿಪ್ರಾಯ ಹೊಂದಿರುವ  ರಘು ಅವರ ಚಿತ್ರಕ್ಕೆ ಹಿಟ್ಲರ್ ಅಮ್ಮ ಯಾರಾಗ್ತಾರೆ ಅಂಬೋದೆ ಸಧ್ಯಕ್ಕೆ ಗೊತ್ತಿಲ್ಲದ ವಿಷ್ಯ. 
ಅನೂಪ್ ಸೀಳಿನ್ ಅವರ ಸಂಗೀತ,ಶಾನ್  ಸಂಭಾಷಣೆ  ಚಿತ್ರಕ್ಕಿದೆ. ಬೆಂಗಳೂರು, ಲಡಕ್ ಮುಂತಾದ ಕಡೆ ಚಿತ್ರೀಕರಣ ಮಾಡಲಾಗುತ್ತದೆ. ರವಿಶಂಕರ್,ಸಾಧು ಕೋಕಿಲ ಮುಂತಾದವರು ಈ ಚಿತ್ರದ ಭಾಗವಾಗಲಿದ್ದಾರೆ. 

ವೆಬ್ದುನಿಯಾವನ್ನು ಓದಿ