ಅಪ್ಪ ಕಮಲ್ ಹಾಸನ್ ಸಿನಿಮಾದಲ್ಲಿ ಐಟಂ ನಂಬರ್ ಮಾಡಲು ಒಲ್ಲೆ ಎಂದ ಶ್ರುತಿ ಹಾಸನ್

ಶನಿವಾರ, 6 ಸೆಪ್ಟಂಬರ್ 2014 (10:09 IST)
ಕಮಲ್ ಹಾಸನ್ ಮಗಳು ಟಾಲಿವುಡ್ ಮತ್ತು ಕಾಲಿವುಡ್  ಲೀಡ್ ನಟಿ ಶ್ರುತಿ ಹಾಸನ್ ಈ ಎರಡು ಚಿತ್ರರಂಗಗಳಲ್ಲಿ ತನ್ನನ್ನು ನಟನೆ ಹಾಗೂ ಐಟಂ ಮೂಲಕ ತೊಡಗಿಸಿಕೊಂಡು ಎಲ್ಲ ವಿಷಯದಲ್ಲೂ ಸಹಿತ ನಾನು ಸೈ ಎನ್ನುವ ಸಂಗತಿ ತಿಳಿಸಿದ್ದಾಳೆ ಜಗತ್ತಿಗೆ. ಆದರೆ ತನ್ನತಂದೆ ಚಿತ್ರವಾದ ವಿಶ್ವರೂಪಂ- 2  ವಿಷಯದ ಬಗ್ಗೆ ಆಕೆ ತೋರಿಸಿರುವ ಅಭಿಪ್ರಾಯಗಳು ಮಾತ್ರ ಕಾಲಿವುಡ್ ಮಾಧ್ಯಮಗಳಲ್ಲಿ  ದೊಡ್ಡ ಸುದ್ದಿಯಾಗಿದೆ ಎಂದೇ ಹೇಳಬಹುದು.
 
ಅದ್ಧೂರಿಯಿಂದ ನಿರ್ಮಾಣ ಆಗುತ್ತಿರುವ ಹಾಗೂ ತಾನೇ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಶ್ರುತಿ ಹಾಸನ್ ಅವರ ವಿಶೇಷ ಡ್ಯಾನ್ಸ್ ಒಂದು ಇದ್ದರೆ ಎಷ್ಟು ಚಂದ ಎನ್ನುವ ಮಾತನ್ನು ಯೂನಿಟ್‌ನವರು ಹೇಳಿದರಂತೆ. ಆ ಮಾತಿಗೆ ಕಮಲ್ ಹಾಸನ್ ಓಕೆ ಅಂದರಂತೆ, ಆದರೆ ಈ ಚೆಲುವೆ ನೋ ನೋ ಎಂದು ತಿರಸ್ಕರಿಸಿದ್ದಾಳಂತೆ ಎನ್ನುವ  ಸುದ್ದಿ  ಸದ್ದು ಮಾಡುತ್ತಿದೆ ಎಲ್ಲೆಲ್ಲೂ. ಈಗ ಆ ಚಿತ್ರದ ಮಾರುಕಟ್ಟೆ ವಿಷಯದಲ್ಲಿ ಸಮಸ್ಯೆ ಎದುರಿಸುತ್ತಿರುವ ಕಮಲ್ ಹಾಸನ್ ತನ್ನ ಮಗಳ ಮೂಲಕ ಚಿತ್ರಕ್ಕೆ ತಿರುವು ತರುವ ಯೋಜನೆ ಮಾಡಿದ್ದರು, ಅದೀಗ ಫೆಯಿಲೂರ್ ಆಗಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಶ್ರುತಿ ಹಾಸನ್ ಹೇಳಿರೋದೇನು ಗೊತ್ತೇ.. ಅಂತಹ ಯಾವುದೇ ಬಗೆಯ ಬೇಡಿಕೆ ತನ್ನ ತಂದೆ ಹೇಳಿಲ್ಲ ಮತ್ತು ಕೇಳಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ಆದರೆ ಕೆಲವು ದಿನಗಳಿಂದ ಕಮಲ್ ಹಾಸನ್ ತಮ್ಮ  ಮಗಳ ಜೊತೆ ನಟಿಸುವ ಆಶಯ ವ್ಯಕ್ತ ಪಡಿಸಿದ್ದರು. ಆ ವಿಷಯಕ್ಕೆ ಸಂಬಂಧಪಟ್ಟಂತೆ ಬರುವುದಾದರೆ ಈಗ ಹರಡಿರುವ ಸುದ್ದಿ ಸಹ ಪೂರಕ ಆಗಿದೆ. ಅಂತಿಮವಾಗಿ ಏನಾಗುತ್ತದೆಯೋ ನೋಡುವಾ!
 

ವೆಬ್ದುನಿಯಾವನ್ನು ಓದಿ