ಆಹಾ ಸ್ಫೂರ್ತಿಗೆ ಮದುವೆಯಂತೆ ವರುಣ್ ಜೋಡಿ ಆದರಂತೆ

ಮಂಗಳವಾರ, 9 ಸೆಪ್ಟಂಬರ್ 2014 (11:14 IST)
ಟೀವಿಯಲ್ಲಿ ಪ್ರಸಾರ ಆಗುವ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ತನ್ನನ್ನು ಬಣ್ಣದಲೋಕಕ್ಕೆ  ಪರಿಚಯಿಸಿಕೊಂಡ ನಟಿ ಸ್ಫೂರ್ತಿ. ಆಕೆಯ ನಟನೆಯ ಮೊದಲ ಚಿತ್ರ ಜಾಲಿಡೇಸ್. ಅದರಲ್ಲಿ  ಆಕೆಯ ನಟನೆಗೆ ಪ್ರಶಂಸೆಗಳ ಸುರಿಮಳೆ ಆಯ್ತು. ಆದರೆ ಸ್ಯಾಂಡಲ್‌ವುಡ್ ನಲ್ಲಿ ಆಕೆಗೆ ಬಯಸಿದಂತಹ ಅವಕಾಶ ಸಿಗಲೇ ಇಲ್ಲ. ಆ ಬಳಿಕ ಮತ್ತೆ ಕಿರುತೆರೆಯತ್ತ ತನ್ನ ಗಮನ ಕೇಂದ್ರೀಕರಿಸಿದ ಈ ಚೆಲುವೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದಳು. ಈಗ ಇವೆಲ್ಲದರ ನಡುವೆ ವೈವಾಹಿಕ ಬದುಕಿಗೆ ಅಡಿ ಇಡುತ್ತಿದ್ದಾಳೆ.
 
 ಜಾಲಿಡೇಸ್ ಚಿತ್ರದಲ್ಲಿ ಆಕೆಯ ಜೊತೆ ನಟಿಸಿದ್ದ ವಿಶ್ವಾಸ್ ಜೊತೆ ಅಕ್ಟೋಬರ್ 30ರಂದು ಈ ಜೋಡಿ ಮದುವೆ ಆಗುತ್ತಿದ್ದಾರೆ. ತಿರುಮಲ ವೆಂಕಟೇಶ್ವರ ಸನ್ನಿಧಿಯಲ್ಲಿ ಇವರಿಬ್ಬರ ಮದುವೆಯನ್ನು ಎರಡು ಕುಟುಂಬದ ಸದಸ್ಯರು ನಿಶ್ಚಯಿಸಿರುವ ಬಗ್ಗೆ ಗಾಂಧಿನಗರವಾಸಿಗಳು ತಿಳಿಸಿದ್ದಾರೆ. ಏಳು ವರ್ಷಗಳಿಂದ ಪ್ರೀತಿಯಲ್ಲಿ ಮುಳುಗಿದ್ದ ಈ ಜೋಡಿ ಈಗ ವೈವಾಹಿಕ ಜೀವನದಿಂದ ಮೇಲೆ ಏಳಲು ಸಿದ್ಧತೆ ನಡೆಸಿವೆ!! ಅವರ ಬದುಕು ಹಸನಾಗಲಿ... 

ವೆಬ್ದುನಿಯಾವನ್ನು ಓದಿ