ಕಾಲಿವುಡ್ ಸುಂದರಿ ಹನ್ಸಿಕ ಮೋಟ್ವಾನಿ. ಆಕೆ ತಮಿಳು ಚಿತ್ರರಂಗದ ಟಾಪ್ ಹೀರೋಯಿನ್. ಮುಖ್ಯವಾಗಿ ಆಕೆ ನಟಿಸಿದ ಚಿತ್ರಗಳು ಯಶಸ್ಸು ಪಡೆದು ಎಲ್ಲರ ಮನೆ ಮಾತಾಗಿದೆ. ಆದರೆ ಈಕೆಗೆ ಅದ್ಯಾಕೋ ಟಾಲಿವುಡ್ ನಲ್ಲಿ ಹೇಳಿಕೊಳ್ಳುವಂತಹ ಗೆಲುವು ದೊರೆತಿಲ್ಲ . ಈ ಮುಖಾಂತರ ಆಕೆಯು ಟಾಲಿವುಡ್ ನಲ್ಲಿಯೂ ಸಹಿತ ನೆಲೆ ಕಾಣುವ ಕನಸು ಇನ್ನು ಕನಸಾಗಿಯೇ ಉಳಿದಿದೆ. ಮುಖ್ಯವಾಗಿ ಆಕೆ ಟಾಲಿವುಡ್ ಟಾಪ್ ಯಂಗ್ ಹೀರೋಗಳನ್ನು ಆಕರ್ಷಿಸಿದಷ್ಟು ಆರಾಮವಾಗಿ ಟಾಲಿವುಡ್ ಟಾಪೆಸ್ಟ್ ಹೀರೋಗಳನ್ನು ಆಕರ್ಷಿಸಿಲ್ಲ .
ರವಿತೇಜ ಅವರ ಜೊತೆ ನಟಿಸಿರುವ ಪವರ್ ಈ ವಾರ ಬಿಡುಗಡೆ ಆಗುತ್ತದೆ. ಆ ಚಿತ್ರದ ಯಶಸ್ಸಿನ ಮೇಲೆ ಆಕೆಯ ಟಾಲಿವುಡ್ ಟಾಪೆಸ್ಟ್ ಹೀರೋಗಳ ಗಮನ ಬೀಳುವುದಕ್ಕೆ ಸಾಧ್ಯವಾಗುತ್ತದೆ ಎನ್ನುವ ನಂಬಿಕೆ ಹೊಂದಿದ್ದಾರೆ ಚಿತ್ರ ವಿಮರ್ಶಕರು. ಇದಕ್ಕೆ ಸಂಬಂಧಿಸಿದಂತೆ ಹನ್ಸಿಕ ಸಿನಿಮಾ ಪತ್ರಿಕೆಯ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡುತ್ತ ರವಿತೇಜ ಅವರ ಬಗ್ಗೆ ತನ್ನ ಭಾವನೆ ವ್ಯಕ್ತ ಪಡಿಸಿರುವುದು ಹೀಗೆ... ಆತ ನನಗಿಂತ 20 ವರ್ಷ ದೊಡ್ಡವರು ಎಂದು ಅನ್ನಿಸಲೇ ಇಲ್ಲ, ಬದಲಾಗಿ 25 ರ ಹರೆಯದ ಯುವಕ ಎನ್ನುವಂತೆ ಪ್ರಣಯದಲ್ಲಿ ಭಾಗವಹಿಸಿದ್ದರು. ಅವರ ಡ್ಯಾನ್ಸ್, ನಟನೆ, ರೋಮ್ಯಾನ್ಸ್ ಎಲ್ಲವು ಯಂಗ್ ಹೀರೋಗಳಂತೆ ಇತ್ತು ಎನ್ನುವ ಮಾತನ್ನು ಹೇಳಿದ್ದಾಳೆ ಈ ಚೆಲುವೆ. ಇಷ್ಟೆಲ್ಲಾ ಹೊಗಳಿಕೆಯಿಂದಾದರೂ ಆಕೆಗೆ ತೆಲುಗಿನ ಟಾಪ್ ಹೀರೋಗಳು ಅವಕಾಶ ನೀಡುವಂತಾಗಲಿ ಎನ್ನುವ ಆಶಯ ನಮ್ಮದಾಗಿದೆ.