ರೂಮಿ ಅಭಿಮಾನಿ ಆಗಿರುವ ಶ್ವೇತ ಅತ್ಯುತ್ತಮ ಛಾಯಾಗ್ರಾಹಕಿ

ಬುಧವಾರ, 10 ಸೆಪ್ಟಂಬರ್ 2014 (11:43 IST)
ಚಿಕ್ಕ ವಯಸ್ಸಿನಲ್ಲಿಯ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಪಡೆದ ನಟಿ ಶ್ವೇತ  ಬಸು ಪ್ರಸಾದ್. ಈಗ ವೇಶ್ಯಾವಾಟಿಕೆಯ ಕಾರಣದಿಂದ ಸಿಕ್ಕಿ  ಹಾಕಿಕೊಂಡಿದ್ದಾಳೆ. ಆದರೆ ಆಕೆಯ ಬದುಕನ್ನು ಒಳ ಹೊಕ್ಕು ನೋಡಿದಾಗ ಆಕೆಯ ಅನೇಕ ಉತ್ತಮ ಸಂಗತಿಗಳು ಕಣ್ಣಿಗೆ ಕಾಣುತ್ತದೆ. ಶ್ವೇತ  ಅತ್ಯುತ್ತಮ ಫೋಟೋಗ್ರಾಫರ್. ಅಲ್ಲದೆ  ಕವಿ ರೂಮಿ ಅವರ ಅಭಿಮಾನಿ. ಅವರ ರಚನೆಗಳಿಂದ ಆಕರ್ಷಿತಳಾಗಿದ್ದಾಳೆ.
 
 ಜಲಾಲುದ್ದೀನ್ ಮಹಮ್ಮದ್ ರೂಮಿ ಓರ್ವ ಪರ್ಷಿಯನ್ ಕವಿ. ಅವರ ರಚನೆಗಳು ಅನೇಕ ಭಾಷೆಗಳಲ್ಲಿ ಅನುವಾದ ಆಗಿದೆ. ಅಮೇರಿಕಾದಲ್ಲಿ ಈಗ ಸಾಹಿತ್ಯಾಭಿಮಾನಿಗಳಿಗೆ ರೂಮಿ ಅವರ ಸಾಹಿತ್ಯ ಹಾಟ್  ಫೇವರೆಟ್. ಅದೀಗ ಆ ದೇಶದ ಬೆಸ್ಟ್ ಸೆಲ್ಲರ್ ಆಗಿದೆ.  ಬಡತನ, ಪ್ರಕೃತಿ, ಸಮಾಜದಲ್ಲಿ ಕಂಡು ಬಂದ ಅಂಶಗಳನ್ನು ಒಳಗೊಂಡ ಅಂಶಗಳನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದು ಅದರ ಎಗ್ಜಿಬಿಶನ್ ಮಾಡಿರುವ ಶ್ವೇತ ಹವ್ಯಾಸಗಳು ಅತ್ಯುತ್ತಮ. ಆದರೆ ಆಕೆಯ ಬದುಕನ್ನು ಕರಾಳವಾಗಿಸಿದೆ ಚಿತ್ರರಂಗ. ತನ್ನ ಪ್ರತಿಭೆಯ ಕಂಪು ತೋರ ಬೇಕಿದ್ದವಳು ಕರಾಳ ಕೂಪದಲ್ಲಿ ಸಿಲುಕಿ ದುರ್ಗಂಧ  ಬೀರುವ ಪರಿಸ್ಥಿತಿ ಉಂಟಾಗಿದೆ.  
 
ಅವಕಾಶಗಳ ಕೊರತೆಯಿಂದ ಇಂತಹ ಕೆಲ್ಸಕ್ಕೆ ಇಳಿದ ಶ್ವೇತ ಬಗ್ಗೆ ಅಪಾರ ಸಂಖ್ಯೆಯಲ್ಲಿ ಸಹಾನುಭೂತಿ ಸಿಗುತ್ತಿದೆ. ಆದರೆ ಇಂತಹ ಹೆಣ್ಣುಮಕ್ಕಳ ಅಸಹಾಯತೆಯನ್ನು ತಮ್ಮ ಆಶಯಕ್ಕೆ ತಕ್ಕಂತೆ ಬದಲಾಯಿಸಿಕೊಂಡ ಗಂಡು ಜೀವಗಳು ಮಾತ್ರ ಕ್ಯಾಮರ ಕಣ್ಣಿಗೆ ಬಿದ್ದಿಲ್ಲ.. ನಾಗರೀಕ  ಸಮಾಜದ ದುರಂತ ಅಂದ್ರೆ ಇದೂ ಒಂದು ಅಲ್ವೇ? 

ವೆಬ್ದುನಿಯಾವನ್ನು ಓದಿ