ಅಪ್ಪನ ಜೊತೆ ನಟಿಸಲ್ಲ ಅನ್ನೋದು ಶುದ್ಧ ಸುಳ್ಳು.. ಅದನ್ನು ನಂಬದಿರಿ ಪ್ಲೀಸ್

ಬುಧವಾರ, 10 ಸೆಪ್ಟಂಬರ್ 2014 (11:46 IST)
ಕಮಲ್ ಹಾಸನ್ ಅವರು ಭಾರತೀಯ ಚಿತ್ರರಂಗದ ಹೆಮ್ಮೆಯ ನಟ. ಅವರು ಮಾಡುವ ಪ್ರಯೋಗಗಳು ಜನಮದಲ್ಲಿ ಶಾಶ್ವತವಾಗಿ ಉಳಿದು ಬಿಡುತ್ತದೆ. ಅವರ ಜೊತೆ ಮಗಳು ಶ್ರುತಿ ಹಾಸನ್ ನಟಿಸುವುದಿಲ್ಲ  ಎನ್ನುವ ಸುದ್ದಿ ಕೆಲವು ದಿನಗಳಿಂದ ಕಾಲಿವುಡ್ ಮಾಧ್ಯಮ ಲೋಕದಲ್ಲಿ ಹೆಚ್ಚು ಸದ್ದು ಮಾಡಿತ್ತು. ಆದರೆ ಅದನ್ನು ಶ್ರುತಿ ಒಪ್ಪಿಲ್ಲ. ಬದಲಾಗಿ ಅಪ್ಪನ ಜೊತೆ ಖಂಡಿತಾ ನಟಿಸುತ್ತೇನೆ ಎಂದು ಹೇಳಿದ್ದಾಳೆ. ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ತನಗೊಂದು ಸ್ಥಾನ ಪಡೆದಿರುವ ಈ ಅಭಿನೇತ್ರಿ ಈಗ ಬಾಲಿವುಡ್ ನಲ್ಲಿ ನಂಬರ್ ಒನ್ ಸ್ಥಾನದ ಪಟ್ಟಿಯಲ್ಲಿ ಇರುವ ಶ್ರುತಿ ಕಾಲಿವುಡ್‌ನಲ್ಲಿಯೂ ಸಹ ಆ ಜಾಗ ಪಡೆಯಲು ಹೋರಾಟ ನಡೆಸಿದ್ದಾಳೆ.  
 
 ಆಕೆ ವಿಶಾಲ್ ಜೊತೆ ಅಭಿನಯಿಸಿರುವ ಪೂಜೈ ಚಿತ್ರದ   ಶೂಟಿಂಗ್ ನಡೀತಾ ಇದೆ. ಸಧ್ಯದಲ್ಲೇ ಇಳಯದಳಪತಿ ವಿಜಯ್ ಅವರ ಚಿತ್ರದಲ್ಲಿ ನಟಿಸುವುದಕ್ಕೆ ಸಿದ್ಧ  ಆಗ್ತಾ ಇದ್ದಾಳೆ. ಅವರ ತಂದೆ ನಿರ್ದೇಶನದ ವಿಶ್ವರೂಪಂ-2 ಚಿತ್ರದಲ್ಲಿ ಐಟಂ ನಂಬರ್‌ನಲ್ಲಿ ಆಕೆ ನಟಿಸಲ್ಲ ಎನ್ನುವ ಸುದ್ದಿ ತುಂಬಾ ಜೋರಾಗಿ ಎಲ್ಲೆಡೆ ಹರಡಿತ್ತು. ಈಗ ಶ್ರುತಿ ಒಪ್ಪಿಕೊಂಡಿರುವ ಚಿತ್ರಗಳ ಕೆಲಸದ ಕಾರಣದಿಂದ ಆಕೆ ತನ್ನ ತಂದೆಗೆ ಈ ಉತ್ತರ ನೀಡಿದ್ದಾಳೆ ಎನ್ನುವ ಸುದ್ದಿ ಇದೆ. ಆದರೆ ಈ ವದಂತಿಯನ್ನು  ಆಕೆ ಖಂಡಿಸಿದ್ದಾಳೆ. ಅವೆಲ್ಲ ಸತ್ಯಕ್ಕೆ  ದೂರವಾಗಿದೆ, ನನ್ನ ತಂದೆ ವಿಶ್ವರೂಪಂ -2 ರಲ್ಲಿ ಅಭಿನಯಿಸುವಂತೆ ಕೇಳಿಲ್ಲ. ಆದರೆ ಭವಿಷ್ಯದಲ್ಲಿ ಅಪ್ಪನ ಜೊತೆ ಖಂಡಿತಾ ನಟಿಸುತ್ತೇನೆ ಎಂದು ಹೇಳಿದ್ದಾಳೆ ಈ ಭಾಮೆ. 

ವೆಬ್ದುನಿಯಾವನ್ನು ಓದಿ