ಗಿರೀಶ್ ಕಾಸರವಳ್ಳಿ ಅವರ ನಿರುತ್ತರದಲ್ಲಿ ಬಾಲಿವುಡ್ ನಟ ರಾಹುಲ್ ಬೋಸ್ ನಟನೆ

ಶನಿವಾರ, 13 ಸೆಪ್ಟಂಬರ್ 2014 (10:19 IST)
ವಿಶ್ವರೂಪಂನ ಖಳನಾಯಕ ನಿಂದ ಹಿಡಿದು, ಜಪಾನಿ ವೈಫ್, ಐ ಯಾಮ್, ತಕ್ಷಕ್ ನಂತಹ ಚಿತ್ರಗಳಿಂದ ಗಮನ ಸೆಳೆದಿರುವ ರಾಹುಲ್ ಬೋಸ್ ಮೊದಲ ಬಾರಿಗೆ ಕನ್ನಡ  ಚಿತ್ರರಂಗಕ್ಕೆ ಬಂದಿದ್ದಾರೆ. ಪ್ರಸಿದ್ಧ ಗಿರೀಶ್ ಕಾಸರವಳ್ಳಿ ನಿರ್ದೇಶನದ ನಿರುತ್ತರ ಚಿತ್ರದ ಭಾಗವಾಗಿದ್ದಾರೆ ರಾಹುಲ್. ಈ ಚಿತ್ರದಲ್ಲಿ ಹಿರಿಯ ಅಭಿನೇತ್ರಿ  ಭಾವನ ನಾಯಕಿ . ಇಲ್ಲಿ ಭಾವನ  ರಾಹುಲ್ ಬೋಸ್ ಅವರ ಪತ್ನಿಯಾಗಿ ನಟಿಸುತ್ತಿದ್ದಾರೆ.
 
ಐಟಿ ಕಂಪೆನಿಯ ಹಿರಿಯ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿರುವ ರಾಹುಲ್ ಯಾವರೀತಿ ಮನುಷ್ಯನ ಅಹಂ ಮತ್ತು ಮಹತ್ವಾಕಾಂಕ್ಷೆ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಸಂಗತಿಯನ್ನು ಈ ನಿರುತ್ತರ ತಿಳಿಸುತ್ತದೆ ಎಂದು ಹೇಳಿದ್ದಾರೆ ರಾಹುಲ್.  ಪ್ರಸ್ತುತ ಬೆಂಗಾಲಿ ಭಾಷೆಯ ಚಿತ್ರದ ಒಂದರಲ್ಲಿ ಪತ್ತೆದಾರನ ಪಾತ್ರ ಮಾಡಿರುವ ರಾಹುಲ್ ಬೋಸ್‌ಗೆ ಕನ್ನಡದಲ್ಲಿ ಉತ್ತಮ ಕಥೆಗಳು ಸಿಕ್ಕರೆ ನಟಿಸಲು ಸಿದ್ಧವಂತೆ . ವಿಶ್ವರೂಪಂನಲ್ಲಿ ತಾವೇ ತಮಿಳು ಡಬ್ ಮಾಡಿದ್ದಾಗಿ ಹೇಳಿರುವ ರಾಹುಲ್ ಕನ್ನಡ ಕಲಿಕೆಗೂ ಸಹಿತ ಆದ್ಯತೆ ನೀಡಿದ್ದಾರೆ.
 
 ಬೆಂಗಳೂರಿನ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ಮೊದಲ ಹಂತದ ಚಿತ್ರೀಕರಣ ಈಗ  ಅಂತಿಮಘಟ್ಟದಲ್ಲಿದೆ.  ರಾಜಸ್ತಾನ, ಹಿಮಾಚಲ ಪ್ರದೇಶ ಇನ್ನಿತರ ಕಡೆಗಳಲ್ಲಿ  ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ. ರಾಹುಲ್ ಬೋಸ್, ಭಾವನಾ ಅವರಲ್ಲದೇ  ಐಂದ್ರಿತಾರೇ ಸಹ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ