ಐ ಸಿನಿಮಾ ಭಾರತೀಯ ಚಿತ್ರರಂಗವನ್ನೇ ತನ್ನತ್ತ ಸೆಳೆದಿದೆ. ಅದಕ್ಕೆ ಕಾರಣ ಆ ಚಿತ್ರವು 180 ಕೋಟಿ ರೂಪಾಯಿಗಳನ್ನು ಹೂಡಿರುವ ಈ ಚಿತ್ರವನ್ನು ಶಂಕರ್ ಅವರು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಯಾವರೀತಿ ಪ್ರಮೋಶನ್ಸ್ ಮಾಡಬೇಕು ಎನ್ನುವ ಗೊಂದಲದಲ್ಲಿ ಇರುವ ಈ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಅದರ ಬಗ್ಗೆ ಸಿಕ್ಕಾಪಟ್ಟೆ ಗಮನ ನೀಡುತ್ತಿದ್ದಾರೆ. ಸಿನಿಮಾದ ಮೋಶನ್ ಪೋಸ್ಟರ್ನ್ನು ಇತ್ತೀಚಿಗೆ ಶಂಕರ್ ಬಿಡುಗಡೆ ಮಾಡಿದರು.
ಚೆನ್ನೈನಲ್ಲಿ ಸೆಪ್ಟೆಂಬರ್ 15 ಅಂದರೆ ಇಂದು ಭಾರಿ ಅದ್ಧೂರಿಯಿಂದ ಈ ಕಾರ್ಯಕ್ರಮ ನಡೆಯಲಿದೆ. ತಾವು ಈ ಕಾರ್ಯಕ್ರಮಕ್ಕೆ ಭಾಗವಹಿಸುತ್ತಿರುವ ಸಂಗತಿಯನ್ನು ಆರ್ನಾಲ್ಡ್ ತಿಳಿಸಿದ್ದಾರೆ. ಅದ್ಭುತವಾದ ಸಿನಿಮಾ ನಿರ್ದೇಶಿಸಿರುವ ಶಂಕರ್ ಅವರಿಗೆ ನನ್ನ ಅಭಿನಂದನೆಗಳು. ಚಿತ್ರ ಖಂಡಿತ ಯಶಸ್ವಿಯಾಗುತ್ತದೆ ಎನ್ನುವ ಮಾತನ್ನು ಹೇಳಿದ್ದಾರೆ ಆರ್ನಾಲ್ಡ್. ವಿಕ್ರಮ್ ಹೀರೋ ಆಗಿರುವ ಐ ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಆರ್ನಾಲ್ಡ್ ಈ ಚಿತ್ರದ ಆಡಿಯೋ ಬಿಡುಗಡೆಗೆ ಬರುತ್ತಿರುವ ಸಂಗತಿ ಎಲ್ಲರ ಗಮನ ಸೆಳೆದಿದೆ.ಅಲ್ಲದೆ ಐ ಚಿತ್ರ ಭಾರತೀಯ ಬಾಕ್ಸಾಫೀಸನ್ನು ಶೇಕ್ ಮಾಡುವುದಲ್ಲ, ಭಾರತೀಯ ಚಿತ್ರರಂಗದಲ್ಲಿ ಹೊಸ ಶಕ್ತಿ ಉಂಟು ಮಾಡುತ್ತದೆ ಎಂದು ನಂಬಲಾಗಿದೆ.