ಡಾ. ವಿಷ್ಣುವರ್ಧನ್ ಹುಟ್ಟು ಹಬ್ಬದಂದು ಸಹೋದರರ ಸವಾಲ್ ಮತ್ತೆ ರಿಲೀಸ್

ಸೋಮವಾರ, 15 ಸೆಪ್ಟಂಬರ್ 2014 (10:36 IST)
ಸ್ಯಾಂಡಲ್ ವುಡ್ ನಲ್ಲಿ ಅನೇಕ ಚಿತ್ರಗಳು ಯಶಸ್ವಿ ಆಗಿರುವುದಲ್ಲದೆ ಅತ್ಯುತ್ತಮ ಫಲಿತಾಂಶ ವನ್ನು ನೀಡಿದೆ. ಅಂತಹ ಸೂಪರ್ ಡೂಪರ್ ಯಶಸ್ಸು ಪಡೆದ ಚಿತ್ರ ಸಹೋದರರ ಸವಾಲ್. ಈ ಚಿತ್ರವು 1977 ರಲ್ಲಿ ಬಿಡುಗಡೆ ಆಗಿತ್ತು. ಎ ಆರ್ ರಾಜು ಅವರ ನಿರ್ಮಾಣದ ಕೆಎಸ್ಆರ್  ದಾಸ್ ಅವರ ನಿರ್ದೇಶನದ ಚಿತ್ರದಲ್ಲಿ ಡಾ. ವಿಷ್ಣುವರ್ಧನ್ ಮತ್ತು ರಜನಿಕಾಂತ್ ಅವರು ಅಭಿನಯಿಸಿದ್ದರು. ಈಗ ಈ ಇಬ್ಬರು ಕಲಾವಿದರ ಅಭಿಮಾನಿಗಳಿಗೆ ಖುಷಿಯ ಸಂಗತಿ. ಆ ಚಿತ್ರ ಮತ್ತೊಮ್ಮೆ ತೆರೆ ಏರುತ್ತಿದೆ.
 
ಈ ಚಿತ್ರವನ್ನು ಕನ್ನಡವಲ್ಲದೇ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲೂ ಸಹಿತ ನಿರ್ಮಿಸಲಾಗಿತ್ತು. ಆ ಭಾಷೆಗಳಲ್ಲಿ ಬೇರೆ ಬೇರೆ ಕಲಾವಿದರ ದಂಡು ಅಭಿನಯಿಸಿದ್ದರು.ಇದನ್ನು ಡಾ. ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ದಿನದಂದು ಬಿಡುಗಡೆ ಮಾಡಲಾಗುತ್ತದೆ. ಪದ್ಮಪ್ರಿಯ ಅವರು ಈ ಚಿತ್ರದಲ್ಲಿ ವಿಷ್ಣು ಜೊತೆಯಾಗಿದ್ದಾರೆ, ಭವಾನಿ ರಜನಿ ಕಾಂತ್ ಅವರ ಜೊತೆ ನಟಿಸಿದ್ದರು.ಈ ಚಿತ್ರದಲ್ಲಿ ಜಯಮಾಲಿನಿ, ಕವಿತಾ, ಟಿ ಎನ್ ಬಾಲಕೃಷ್ಣ ಅವರು ಮುಖ್ಯ ಭೂಮಿಕೆಯಲ್ಲಿದ್ದರು.

ವೆಬ್ದುನಿಯಾವನ್ನು ಓದಿ