ಸುಬ್ರಮಣಿ ಶ್ರೀನಗರ ಕಿಟ್ಟಿ ನಮ್ ಹುಡುಗ ಇನ್ನು ಹಾಡೋದಷ್ಟೇ ಬಾಕಿ

ಮಂಗಳವಾರ, 16 ಸೆಪ್ಟಂಬರ್ 2014 (11:39 IST)
ಶ್ರೀನಗರ ಕಿಟ್ಟಿ ಈಗ ಲೀಡಿಂಗ್ ಹೀರೋಗಳಲ್ಲಿ  ಒಬ್ಬರು. ಇತ್ತೀಚೆಗೆ ಅವರ ನಟನೆಯ ಬಹುಪರಾಕ್ ಬಿಡುಗಡೆ ಆಯಿತು. ಅವರ ನಟನೆಯ ಮತ್ತೊಂದು ಸಿನಿಮಾ ನಮಸ್ತೇ ಮೇಡಂ ಬಿಡುಗಡೆಯ ಹಾದಿಯಲ್ಲಿದೆ. ಈಗ ಕಿಟ್ಟಿ ನಟನೆಯ  ಸುಷ್ಮಾ ಕ್ರಿಯೇಷನ್ ಅಡಿಯಲ್ಲಿ ತಯಾರಾಗುತ್ತಿರುವ ಸುಬ್ರಮಣಿ...ನಂ ಹುಡ್ಗ ಚಿತ್ರೀಕರಣ ಬಿರುಸಿನಿಂದ ಪೂರೈಸಿದೆ. ಕ್ಲೈಮಾಕ್ಸ್ ಹಂತಕ್ಕೆ ತಲುಪಿರುವ ಈ ಚಿತ್ರ  ಎರಡು ಹಾಡುಗಳನ್ನು ಚಿತ್ರೀಕರಿಸುವತ್ತ ಗಮನ  ನೆಟ್ಟಿದೆ. ಜೆ ಕೆ ಎಸ್  ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಜವಾಬ್ದಾರಿ ಹೊತ್ತಿದ್ದಾರೆ. ಹಾಡಿನ ಚಿತ್ರೀಕರಣ  ಪೂರ್ಣವಾದರೆ ಚಿತ್ರದ ಕೆಲಸ ಮುಗಿದಂತೆ. 
 
 ದಿಶಾ ಪಾಂಡೆ, ಪೂರ್ಣಿಮ  ಚಿತ್ರದ ನಾಯಕಿಯರಾಗಿದ್ದಾರೆ. ಎಸ್ ಸುನಿಲ್ ಯಾದವ್ ಅವರ ನಿರ್ಮಾಣದ ಸುಬ್ರಮಣಿಯನ್ನು ಕ್ಯಾಮರಾದಲ್ಲಿ ಬಂಧಿಸಿಟ್ಟಿದ್ದಾರೆ.  ಸೀತಾರಾಂ ಜಿ ಎಸ್ ವಿ  ಮತ್ತು ಸಂಗೀತ ನಿರ್ದೇಶನವನ್ನು  ಜೂಡ್ ಸ್ಯಾಂಡಿ ಮಾಡಿದ್ದಾರೆ. ಶರತ್ ಲೋಹಿತಾಶ್ವ,ವಸಿಷ್ಠ ಎನ್ ಸಿಂಹ ಮುಂತಾದವರು ಸುಬ್ರಮಣಿಗೆ   ಜೊತೆಯಾಗಿದ್ದಾರೆ. ಚಿನ್ನಿ ಪ್ರಕಾಶ್  ಕೊರಿಯಾಗ್ರಫಿ  ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ